ಮಕ್ಕಳ ಬದುಕಿಗೆ ಯಾರೂ ಕಂಟಕವಾಗದಿರಿ

ಅರಕೇರಾ,ಫೆ.೨೪- ಕಲಿಯುವ ಮತ್ತು ನಲಿಯುವ ವಯಸ್ಸಿನ ಮಕ್ಕಳಲ್ಲಿ ಮನಸ್ಸಿನ ತುಂಬಾ ಬಣ್ಣದ ಕನಸ್ಸುಗಳನ್ನು ಹೊತ್ತುಕೊಂಡಿರುತ್ತಾರೆ, ಅವರ ಬದುಕಿಗೆ ಯಾರೊಬ್ಬರೂ ಕಂಟಕವಾಗದಿರಿ ಎಂದು ಶೃತಿ ಸಂಸ್ಕೃತಿ ಸಂಸ್ಥೆ ಕಲಾ ತಂಡದ ನಾಯಕಿ ಚಿನ್ನಕ್ಕ ಹೇಳಿದರು.
ಸಮೀಪದ ಮುಷ್ಟೂರು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶೃತಿ ಸಂಸ್ಕೃತಿ ಸಂಸ್ಥೆಯಿಂದ ಬುಧವಾರ ಏರ್ಪಡಿಸಿದ್ದ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ದತಿ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕತೆ ಇವೆರಡೂ ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಪ್ರಭಾವ ಬೀರುವ ಅಂಶಗಳು. ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ಅಡ್ಡಪರಿಣಾಮ ಬೀರುತ್ತವೆ. ಮಕ್ಕಳಲ್ಲಿ ಗರ್ಭ ಚೀಲ ಬೇಳೆದಿರುವುದಿಲ್ಲ. ಮುಂದೆ ಜನಿಸುವ ಮಗುವು ಅಂಗವೈಕಲ್ಯತೆ ಅಥವಾ ತಾಯಿ ಮಗು ಹುಟ್ಟು ಸಾವಿನ ನಡುವೆ ಹೋರಾಡಬೇಕಾಗುವ ಅನಿವಾರ್ಯತೆ ಎದುರಾಗುತ್ತದೆ. ಹಣದಾಸೆಗೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಕಳುಹಿಸಬೇಡಿ, ಬಡತನದಿಂದ ಮಕ್ಕಳ ಭವಿ?ಕ್ಕೆ ಕುತ್ತಾಗಬೇಡಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಇದೇ ವೇಳೆ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಯಿತು.
ಈ ವೇಳೆ ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್ ಗಣೇಕಲ್, ನಿರ್ದೇಶಕ ಡಿಂಗ್ರಿ ನರಸಪ್ಪ, ಪ್ರಮುಖರಾದ ಗೌರಮ್ಮ, ವಿರೇಶ, ಸಂಗಪ್ಪ ಗಬ್ಬೂರು, ನಾಗರತ್ನ, ಆಶಾ ಕಾರ್ಯಕರ್ತೆ ಎಲ್ಲಮ್ಮ ಗೆಜ್ಜೆಭಾವಿ, ಜಯಮ್ಮ ಇತರರಿದ್ದರು.