ಮಕ್ಕಳ ಪ್ರೌಢಶಾಲೆಯ ಕ್ರೀಡಾಕೂಟಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.27: ಎರಡು ವರ್ಷಗಳಿಂದ ಕೊರೋನ್  ಇರುವ ಕಾರಣದಿಂದಾಗಿ ಯಾವುದೇ ಕ್ರೀಡೆಗಳಿಗೆ ಚಾಲನೆಯನ್ನು ನೀಡಿದಿಲ್ಲ. ಕೊರೋನ್  ನಿಯಂತ್ರಣ ಬಂದ ಪರಿಣಾಮವಾಗಿ ವಿದ್ಯಾರ್ಥಿಗಳನ್ನು ದೈಹಿಕವಾಗಿ ಬಲಗೊಳಿಸುವ ಉದ್ದೇಶಕ್ಕಾಗಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅದರಂತೆಯೇ ಹ್ಯಾಳ್ಯಾ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟ 2022 -23ನೇ ಸಾಲಿನ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಈ ಕ್ರೀಡಾಕೂಟವನ್ನು ಪಟ್ಟಣದ ಸಿಪಿಎಡ್ ಕಾಲೇಜಿನ ಮೈದಾನದಲ್ಲಿ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ದೂಪದಹಳ್ಳಿ, ವತಿಯಿಂದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಈ ಕ್ರೀಡಾಕೂಟವನ್ನು ಹ್ಯಾಳ್ಯಾ ವಲಯ ಮಟ್ಟದ ಸಂಚಾಲಕರಾದ ಸರ್ಕಾರಿ ಪ್ರೌಢಶಾಲೆ ಶಾಲೆ ಹ್ಯಾಳ್ಯಾದ  ಮುಖ್ಯಶಿಕ್ಷಕರಾದ ಡಿಎನ್ ಶ್ರೀನಿವಾಸ
ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಕ್ರೀಡಾಕೂಟದಲ್ಲಿ ಒಟ್ಟು ಏಳು ಶಾಲೆಗಳು ಪಾಲ್ಗೊಂಡಿದ್ದವು. ವಾಲಿಬಾಲ್,  ಖೋ ಖೋ,  ಕಬಡ್ಡಿ, ಥ್ರೋಬಾಲ್,  ಅಥ್ಲೆಟಿಕ್ಸ್  ಆಟಗಳನ್ನು ನಡೆಸಲಾಯಿತು.
ವಿದ್ಯಾರ್ಥಿನಿಯರ  ಫೈನಲ್  ಖೋಖೋ ಪಂದ್ಯದಲ್ಲಿ ಹ್ಯಾಳ್ಯಾ ಮತ್ತು ಅಯ್ಯನಹಳ್ಳಿ ಶಾಲೆಗಳು ಮುಖ ಮುಖಿಯಾಗಿದ್ದವು. ಈ ಫೈನಲ್ ಪಂದ್ಯದಲ್ಲಿ ಸರ್ಕಾರಿ ಹಿರಿಯ ಪ್ರೌಢಶಾಲೆ  ಹ್ಯಾಳ್ಯಾ ವಿದ್ಯಾರ್ಥಿನಿಯರು ಎರಡು ಅಂಕಗಳ ಅಂತರದಿಂದ ಗೆಲುವನ್ನು ಸಾಧಿಸಿತು.
ಈ ಸಂದರ್ಭದಲ್ಲಿ ಕ್ರೀಡಾಕೂಟದ ಆಯೋಜಕರಾದ ದೂಪದಹಳ್ಳಿ ಪ್ರೌಢಶಾಲೆಯ ಮುಖ್ಯಗುರುಗಳಾದ ಗುರುಬಸವರಾಜ್, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಶ್ರೀ ಆನಂದ ದೇವರ ಕೊಳದ ಶ್ರೀ ನಿಂಗಪ್ಪ, ತಿಮ್ಲಾಪುರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸಣ್ಣ ಲಿಂಗನಗೌಡ, ಕರಿ ಲಿಂಗೇಶ್ವರ ಪ್ರೌಢಶಾಲೆ ಅಯ್ಯನಹಳ್ಳಿಯ ಮುಖ್ಯ ಶಿಕ್ಷಕರಾದ ಶ್ರೀ ರಾಘವೇಂದ್ರ, ರಾಂಪುರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅಜ್ಜಯ್ಯ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಗಳ ತಂಡದ ವ್ಯವಸ್ಥಾಪಕರು ಹಾಜರಿದ್ದರು.