ಮಕ್ಕಳ ಪ್ರೇಮಿ ನೆಹರೂ- ಪ್ರೇಮಮೂರ್ತಿ

ಸಂಡೂರು:ನ:15 ಪಂಡಿತ್ ಜವಾಹರಲಾಲ್ ಅವರು ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದರು, ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಎಂದು ಅವರ ಕರೆಯ ಮೇರೆಗೆ ನವೆಂಬರ್ 14 ನ್ನು ಮಕ್ಕಳದಿನಾಚರಣೆ ಎಂದು ಆಚರಿಸುತ್ತಿದ್ದ ಪ್ರತಿಯೊಂದು ಮಗುವು ಸಹ ಉತ್ತಮ ಶಿಕ್ಷಣ ಪಡೆಯಲು ಸಮಾಜದ ಉತ್ತಮ ಪ್ರಜೆಯಾಗಲಿ ಎಂದು ಬಯಸಿದ್ದರು ಎಂದು ಶಿಶಿ ಅಭಿವೃದ್ದಿ ಅಧಿಕಾರಿ ( ಸಿ.ಡಿ.ಪಿ.ಓ) ಪ್ರೇಮಮುರ್ತಿ ತಿಳಿಸಿದರು.
ಅವರು ತಾಲೂಕಿನ ಕೃಷ್ಣನಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದಿನಾಚರಣೆಯನ್ನು ಸರ್ಕಾರಿ ಹಬ್ಬವಾಗಿ ಪ್ರತಿಶಾಲೆಯಲ್ಲಿ ಆಚರಿಸಲಾಗುತ್ತಿದೆ, ಅಂಗನವಾಡಿ ಕೇಂದ್ರದ ಮೂಲಕ ಮಕ್ಕಳ ಸರ್ವತೋಮುಕ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಗರ್ಭಿಣಿ ಇದ್ದಾಗ ಪೌಷ್ಠಿಕ ಆಹಾರ, ಮಗು ಜನಸಿದಾಗ ಬೇಕಾದ ಎಲ್ಲಾ ರೀತಿಯ ಪೌಷ್ಠಿಕ ಆಹಾರವನ್ನು ನೀಡಿ ನಂತರದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಣ, ಮತ್ತು ಬೆಳವಣಿಗೆಗೆಅನುಕೂಲ ಮಾಡಲಾಗಿದ್ದು ಸಾರ್ವಜನಿಕರು ಇದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಬಾಣದಾರ್ ಸುಭಾನ್ ಸಾಬ್, ಮೇಲ್ವಿಚಾರಕಿ ಎಂ.ಎಂ. ಭಜಂತ್ರಿ, ಅಂಗನವಾಡಿ ಕಾರ್ಯಕರ್ತೇಯರು, ಮಕ್ಕಳು ಉಪಸ್ಥಿತರಿದ್ದು ಮಕ್ಕಳ ದಿನಾಚರಣೆಯನ್ನು ಆಚರಿಸಿ ಮಕ್ಕಳಿಗೆ ಸಿಹಿ ವಿತರಿಸಿ ವಿವಿಧ ಆಟಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.