ಸಂಜೆವಾಣಿ ವಾರ್ತೆ
ಕುಕನೂರು, ಮೇ.29: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಯಲಬುರ್ಗಾ ಹಾಗೂ ಗುರುದೇವ ಕೋಚಿಂಗ್ ಕ್ಲಾಸಸ್ ಮಂಗಳೂರು ಇವರಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದ ಮುಕ್ತಾಯ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರಗಿತು.
ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಆಟ ಹಾಡು ನೃತ್ಯ ಚಿತ್ರಕಲೆ ಸಂಗೀತ ಅಭಿನಯ ಮಾನವೀಯ ಮೌಲ್ಯಗಳು ತುಂಬಾ ಅವಶ್ಯ. ಈ ನಾಡಿನ ನೆಲ ಜಲ ಭಾಷೆ ಹಾಗೂ ಪರಿಸರದ ಬಗ್ಗೆ ಮಕ್ಕಳಲ್ಲಿ ಕಾಳಜಿಯನ್ನು ಮೂಡಿಸುವುದು ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಜೊತೆಗೆ ಛಲ ಮತ್ತು ಕಠಿಣ ಪರಿಶ್ರಮದಿಂದ ಸತತ ಅಧ್ಯಯನ ಮಾಡಿ ಗುರುಗಳ ಮಾರ್ಗದರ್ಶನವನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು ಎಂದು ಸಾಧಿಸಿ ತೋರಿಸಿದ ಈ ವಿದ್ಯಾರ್ಥಿಳು ಮುಂದಿನ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಮ.ಸಾ.ಪ ಅಧ್ಯಕ್ಷ ಹನುಮಂತಪ್ಪ ಉಪ್ಪಾರ್ ವಾಸ್ತವಿಕವಾಗಿ ಮಾತನಾಡಿದರು.
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ಇಂಥ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳಬೇಕು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಪರಿಷತ್ತು ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಮುಂದೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಮಕ್ಕಳ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಸರ್ವ ರಂಗದಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುತ್ತಿರುವುದು ಸಂತಸ ಸಂಗತಿ ಎಂದು ನುಡಿದರು.
ಇಂದಿನ ಕೆಲಸವನ್ನು ಇಂದೇ ಮಾಡಬೇಕು ನಾಳೆ ಎಂದು ಮುಂದೂಡಬಾರದು. ಇದರಿಂದ ನಮಗೆ ಹಿನ್ನಡೆಯಾಗುತ್ತದೆ. ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಸಾಧಿಸುವ ಛಲ ನಿಮ್ಮಲ್ಲಿ ಬರಬೇಕು ಎಂದು ದ್ಯಾಮಣ್ಣ ಮುಗುಳಿ ಮಾತನಾಡಿದರು. ಹಾಗೆಯೇ ಶರಣಪ್ಪ ಉಮಚಗಿ, ಈರಣ್ಣ ದಿಂಡೂರು,ಅಶೋಕ ಗಾಣಿಗೇರ ಮಾತನಾಡಿದರು. ಕಲ್ಲಪ್ಪ ಕಳಕೇರಿ, ವೀರೇಶ್ ಮ್ಯಾಗಳೇಶಿ, ದೊಡ್ಡಬಸಪ್ಪ ಉಪನ್ಯಾಸಕರು ಬಳೂಟಿಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಸಾಬ್ ಕಾಲಿಮಿರ್ಚಿ ವಹಿಸಿಕೊಂಡು ಮಾತನಾಡುತ್ತಾ ಮಕ್ಕಳಲ್ಲಿರುವ ಕೌಶಲ್ಯವನ್ನು ಗುರ್ತಿಸಿ, ಬೆಳೆಸಿ ಪ್ರೋತ್ಸಾಹಿಸುತ್ತಿರುವ ಪರಿಷತ್ತಿನ ಕಾರ್ಯವನ್ನು ಬಣ್ಣಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆ ಬಳೂಟಿಗಿಯ ಕಾರ್ತಿಕ್ ಬಿಎನ್ ಸನ್ಮಾನವನ್ನು ಸ್ವೀಕರಿಸಿ ತನ್ನ ಅನುಭವವನ್ನು ಹಂಚಿಕೊಂಡರು ಹಾಗೂ ಸವಿತಾ ತಳಬಾಳ ಸರ್ಕಾರಿ ಪ್ರೌಢಶಾಲೆ ವಣಗೇರಿಯ ಈ ವಿದ್ಯಾರ್ಥಿ ಕೂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕು.ಪವಿತ್ರ ಶಣಪ್ಪ ಲದ್ದಿ, ತಾಸ್ಮೀಯ ಅಲ್ಲಹಳ್ಳಿ, ಸ್ಪೂರ್ತಿ ದ್ಯಾಂಪುರ್, ಸುಧಾ ಈರಪ್ಪ ಅಂಬಳಿ, ಮೀನಾಕ್ಷಿ ಹೊನ್ನುಂಚಿ ಹಾಗೂ ಅಮಿನುದ್ದಿನ್ ಮಂಗಳೂರು ಈ ಎಂಟು ಜನ ಟಾಪ್ ವಿದ್ಯಾರ್ಥಿಗಳಿಗೆ ಈ ವೇದಿಕೆಯಲ್ಲಿ ಇಂದು ಸನ್ಮಾನಿಸಲಾಯಿತು.