ಮಕ್ಕಳ ಪ್ರತಿಭೆ ಗುರುತಿಸಲು “ಚಿಗುರು” ಸಹಕಾರಿ

ಚಿತ್ರದುರ್ಗ, ನ.28; ಮಕ್ಕಳಲ್ಲಿ ಅಡಗಿರುವ ವಿಶಿಷ್ಟ ಕಲೆ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು “ಚಿಗುರು” ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಹೇಳಿದರು. ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಸಂಕೀರ್ಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ “ಚಿಗುರು” ಪ್ರತಿಭಾವಂತ ಮಕ್ಕಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 14 ವರ್ಷದೊಳಗಿನ ಮಕ್ಕಳಲ್ಲಿ ಅಡಗಿರುವ ವಿವಿಧ ಕಲೆ, ಪ್ರತಿಭೆಗಳ ಅನಾವರಣಗೊಳಿಸಲು, ಅರಳುವ ಪ್ರತಿಭೆಗೆ ಚಿಗುರು ಕಾರ್ಯಕ್ರಮ ಸೂಕ್ತವೇದಿಕೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸಿವುದುರ ಜೊತೆಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಲಿವೆ ಎಂದು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲೆ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಹಾಗೂ ಪೋಷಿಸುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಕಲಾವಿದರಿಗೆ ಧನ ಸಹಾಯ ಹಾಗೂ ಅಶಕ್ತ ಕಲಾವಿದರಿಗೆ ಮಾಸಾಶನ ನೀಡಿ ಪೋಷಿಸುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ.  ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಒ ಶಶಿಧರ್ ಮಾತನಾಡಿ, ಶಿಕ್ಷಣ ಕೇವಲ ಏಕಮುಖವಾಗಿ ಸಾಗಬಾರದು.ಶಿಕ್ಷಣ ಕೇವಲ ಪಠ್ಯಪುಸ್ತಕದ ಓದು ಆಗಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ಅಗತ್ಯತೆ ಇದೆ ಎಂದು ಹೇಳಿದರು.ಕಲೆ, ಕಲಾವಿದರನ್ನು ಗುರುತಿಸುವವರ ಸಂಖ್ಯೆ ಹೆಚ್ಚು. ಕಲೆಗೆ ಮನಸ್ಸನ್ನು ಸೆಳೆಯುವ ಶಕ್ತಿ ಇದೆ. ಕಲೆಯ ಜೊತೆಗೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ಈಚೆಗೆ ನಿಧನರಾದ ಪುನೀತ್‌ರಾಜ್‌ಕುಮಾರ್ ಅವರನ್ನು ರಾಜ್ಯ, ದೇಶ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನ ಇತ್ತು.  ಪ್ರತಿಯೊಬ್ಬರಲ್ಲಿಯೂ ಒಂದೊAದು ಕಲೆ ಅಡಗಿರುತ್ತದೆ. ಮಕ್ಕಳಲ್ಲಿನ ಹಾಡು, ಗಾಯನ, ನೃತ್ಯ ಸೇರಿದಂತೆ ವಿವಿಧ ಕಲೆ, ಪ್ರತಿಭೆಗಳ ಅನಾವರಣಕ್ಕೆ ಚಿಗುರು ಅಂತಹ ಕಾರ್ಯಕ್ರಮಗಳು ಸಹಕಾರಯಾಗಿವೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಓದಿಗೆ ಸೀಮಿತವಾಗದೇ ಅನೇಕ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಬೇಕು. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು. ಕೋವಿಡ್‌ನಿಂದಾಗಿ ಪ್ರತಿಭಾಕಾರಂಜಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.  ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ಜಾತಿ) ಪ್ರಾಂಶುಪಾಲ ಜೆ.ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದು ಕಲೆ ಇರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಲೆ, ಪ್ರತಿಭೆ ಅನಾವರಣಗೊಳ್ಳಬೇಕು ಎಂದು ಹೇಳಿದರು. ಹಿರಿಯೂರಿನ ಶ್ರಾವ್ಯಶ್ರೀ ಮತ್ತು ತಂಡದವರಿAದ ಕರ್ನಾಟಕ ಶಾಸ್ತಿçÃಯ ಸಂಗೀತ, ಸುಜನ್ ಮತ್ತು ತಂಡದವರು ನಾಟಕಾಭಿನಯ, ಯಸಿಕ ಮತ್ತು ತಂಡದವರಿAದ ಸುಗಮ ಸಂಗೀತ ಕಾರ್ಯಕ್ರಮ, ಹೊಸದುರ್ಗದ ದಿವ್ಯ ಮತ್ತು ಬಿಂದು ಮತ್ತು ತಂಡದವರ ಜಾನಪದಗೀತೆ ಮಂತ್ರಮುಗ್ಧರನ್ನಾಗಿಸಿತು. ಹಿರಿಯೂರಿನ ಲಲನ ಕೃಷ್ಣ ಅತ್ಯುತ್ತಮವಾಗಿ ಕೀಬೋರ್ಡ್ ನುಡಿಸಿದರು.  ಜೀವಿಕಾ ಜಯರಾಮ್ ಅವರಿಂದ ಭರತನಾಟ್ಯ, ಬಿಲ್ವಿಕಾ ಮತ್ತು ತಂಡದವರು ಸಮೂಹ ನೃತ್ಯ ಜರುಗಿತು. ಎನ್.ಎಂ.ಕೃತನ್ ಅವರು ಏಕಪಾತ್ರಾಭಿನಯ ನಡೆಸಿಕೊಟ್ಟರು. ಮೊರಾರ್ಜಿ ದೇಸಾಯಿ ಶಾಲೆಯ ಪ್ರತಿಭಾ ಕಿತ್ತೂರುರಾಣಿ ಚನ್ನಮ್ಮ ಕುರಿತು ಹಾಗೂ ಧನುಷ್ ಲಾಡ್ ಏಕಪಾತ್ರಾಭಿನಯ ಮಾಡಿದರು. ಸುಜನ್ ಮತ್ತು ತಂಡದವರು ನಾಟಕ ಪ್ರದರ್ಶನ ನೀಡಿದರು.  ಕಾರ್ಯಕ್ರಮದಲ್ಲಿ ದೇವರಕೊಟ್ಟ ಹಿಂದುಳಿದ ವರ್ಗಗಳ ವಸತಿ ಶಾಲೆಯ ಪ್ರಾಂಶುಪಾಲ ದೇವರಾಜ್, ಅಲ್ಪಸಂಖ್ಯಾತ ವರ್ಗದ ವಸತಿ ಶಾಲೆಯ ಪ್ರಾಂಶುಪಾಲ ತಿಮ್ಮಣ್ಣ, ಕಲಾಸಂಪದ ನಾಟ್ಯ ಶಾಲೆಯ ಗೀತಾಭಟ್, ಹಿರಿಯೂರು ತಾಲ್ಲೂಕು ರೋಟರಿಕ್ಲಬ್ ಮಾಜಿ ಅಧ್ಯಕ್ಷ ಆನಂದ ಶೆಟ್ರು, ಶಿಕ್ಷಕರಾದ ಪಿ.ನೀಲಕಂಠಯ್ಯ ಸ್ವಾಗತಿಸಿದರು. ವಿ.ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ವಸತಿ ಶಾಲೆಯ ಶಿಕ್ಷಕರಾದ ಕೆ.ಟಿ.ರುದ್ರಪ್ಪ, ಪಿ.ಸವಿತಾ, ಜೆ.ಜಿ.ಬೀರೇಶ್, ಎಸ್.ಆನಂದ, ನಿಲಯ ಪಾಲಕ ವಿಜಯಕುಮಾರ್‌ರಾಠೋಡ್ ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಇದ್ದರು. ಕಲಾವಿದರಾದ ಹರೀಶ್ ಎಂ.ಕೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 
Attachments areaReplyReply to allForward