ಮಕ್ಕಳ  ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ

ದಾವಣಗೆರೆ, ಏ. 4; ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಅವಶ್ಯಕ ಎಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ ಎಸ್. ಚಿಗಟೇರಿ ತಿಳಿಸಿದರುಇಲ್ಲಿನ ವಿನೋಬನಗರದ 1ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿರುವ ಬೇಸಿಗೆ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ವರ್ಷಪೂರ್ತಿ ಬರೀ ಓದು ಓದು ಎಂದು ವೇಳೆಯನ್ನು ಕಳೆದಿರುತ್ತೀರಿ, ಮಕ್ಕಳು ಪರೀಕ್ಷೆ ಮುಗಿದಿದೆ ಎಂದು ವ್ಯರ್ಥವಾಗಿ ರಜೆಯನ್ನು ಕಳೆಯದೇ ಇಂತಹ ಬೇಸಿಗೆ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಬುದ್ದಿಶಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್.ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಈ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಇಂತಹ ಬೇಸಿಗೆ ಚಿತ್ರಕಲಾ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಶಿಬಿರದಿಂದ ಮಕ್ಕಳು ಚಿತ್ರಕಲೆಯ ವಿವಿಧ ಪ್ರಕಾರಗಳನ್ನು ಆಟ ಆಡುತ್ತಾ ಕಲಿತು ಸಂತೋಷದಿAದ ಹೊಸ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಿರಿ. ಇದರಿಂದ ನೀವು ಜಿಲ್ಲಾ, ರಾಜ್ಯ, ರಾಷ್ಟçಮಟ್ಟದಲ್ಲಿ  ಕೀರ್ತಿ ತರುವಂತಾಗಿರಿ ಎಂದು ಶುಭ ಹಾರೈಸಿದರು.