
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 9 : – ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮುಖ್ಯ ವೇದಿಕೆ ಪ್ರತಿಭಾ ಕಾರಂಜಿಯಾಗಿದೆ ಎಂದು ಪಟ್ಟಣದ 7ನೇ ವಾರ್ಡ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಬಿ ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಪಟ್ಟಣದ ಏಳನೇ ವಾರ್ಡ್ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಮಕ್ಕಳ ಪ್ರತಿಭೆ ಪ್ರತಿಭಾ ಕಾರಂಜಿಯಿಂದ ಗುರುತಿಸಿ ಅದಕ್ಕೆ ತಕ್ಕಂತೆ ಶಿಕ್ಷಕರು ಹಾಗೂ ಪಾಲಕ ಪೋಷಕರು ಪ್ರೋತ್ಸಾಹಿಸಬೇಕಿದೆ ಮಕ್ಕಳು ಪ್ರತಿಭೆಯನ್ನು ತೊರ್ಪಡಿಸುವ ಸ್ಪರ್ಧೆಯನ್ನು ಪ್ರತಿಭಾ ಕಾರಂಜಿ ಮೂಲಕ ನಡೆಸಲಾಗುತ್ತಿದ್ದೂ ತೀರ್ಪುಗಾರರು ನಿಷ್ಪಾಕ್ಷಪಾತವಾಗಿ ತೀರ್ಪು ನೀಡಬೇಕು ಎಂದು ತೀರ್ಪುಗಾರರಿಗೆ ಕಿವಿ ಮಾತು ಹೇಳಿದರು.
ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಿ ಶಿವರಾಜ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪಿ.ವಿ ಕೊತ್ಲಾಪ್ಪ ಶಿಕ್ಷಕರ ಸಂಘದ ಉಪಾಧ್ಯಕ್ಷರುಗಳಾದ ಇಂದಿರಾ,ಜಿನಾಭಿ,ಬಿ ಆರ್ ಪಿ ಯ ರವೀಂದ್ರ, ಬಿ ಆರ್ ಪಿ ಆರ್ ಬಸವರಾಜ್ ಬಿ ಆರ್ ಪಿ ನಾಗರಾಜ್ ಸಿ ಆರ್‌ಪಿಗಳಾದ ದೊಡ್ಡಪ್ಪ ಮತ್ತು ಪ್ರಕಾಶ್ ಹಾಗೂ ಮುಖ್ಯ ಗುರುಗಳಾದ ಮಾರೇಶ ಹಾಗೂ ಶಿಕ್ಷಕ ವರ್ಗದವರು ಭಾಗವಹಿಸಿದ್ದರು. ಸುಮಾರು 60ರಿಂದ 70 ಮಕ್ಕಳು ಒನಕೆ ಓಬವ್ವ, ಸೇರಿದಂತೆ ಇತರರ ವೇಷಭೂಷಣ ಧರಿಸಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
One attachment • Scanned by Gmail