ಮಕ್ಕಳ ಪ್ರತಿಭೆಗೆ ಪಾಲಕರ ಪೆÇ್ರೀತ್ಸಾಹ ಅಗತ್ಯ: ಕೋಸಂಬೆ

ಭಾಲ್ಕಿ:ಎ.26:ಇಂದಿನ ಮಕ್ಕಳು ತುಂಬಾ ಜಾಣರಾಗಿದ್ದು, ಪೆÇೀಷಕರು ತಮ್ಮ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಅವರ ಕಲೆಗೆ ವಿಶೇಷ ಪೆÇ್ರೀತ್ಸಾಹ ನೀಡಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಸಮುಚ್ಛಯದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಿಗಮಪ ಲಿಟ್ಲ್ ಚಾಂಪ್ ನಲ್ಲಿ ತನ್ನ ವಿಶೇಷ ಕಂಠ, ಹಾಡುವ ಶೈಲಿ, ಮುಖಭಾವದ ಮೂಲಕ ನಾಡಿನ ಜನರ ಮನೆ ಮಾತಾಗಿರುವ ದಿಯಾ ಹೆಗಡೆ ಅವಳಲ್ಲಿರುವ ಅದ್ಭುತ ಕಲೆಯನ್ನು ಪೆÇೀಷಕರು ಗುರುತಿಸಿ ಪೆÇೀಷಿಸುತ್ತಿರುವುದರಿಂದ ನಾಡಿಗೆ ಉತ್ತಮ ಹಾಡುಗಾರ್ತಿ ದೊರೆತಂತಾಗಿದೆ. ಹಾಗಾಗಿ, ಪಾಲಕರು ಮಕ್ಕಳ ಆಸಕ್ತಿಯನ್ನು ಅರಿತುಕೊಂಡು ಅವರನ್ನು ಸಾಧನೆಗೆ ಹುರಿದುಂಬಿಸಬೇಕು ಎಂದು ತಿಳಿ ಹೇಳಿದರು.
ದಿಯಾ ಹೆಗಡೆ ತನ್ನ ಮಧುರ ಕಂಠದಿಂದ ಕನ್ನಡದ ಪ್ರಸಿದ್ಧ ಚಲನಚಿತ್ರ ಗೀತೆಗಳನ್ನು ಹಾಡುವುದರ ಮುಖಾಂತರ ಸಭಿಕರನ್ನು ಮನರಂಜಿಸಿದರು.
ಪ್ರೌಢ ಶಾಲೆ ಮುಖ್ಯಶಿಕ್ಷಕ ಮಹೇಶ್ ಮಹಾರಾಜ್, ಕೀರ್ತಿ ಕೋಸಂಬೆ, ಲಕ್ಷ್ಮಣ ಮೇತ್ರೆ, ಬಸವರಾಜ್ ಪ್ರಭಾ ಸೇರಿದಂತೆ ಇತರರು ಇದ್ದರು.
ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ನಿರೂಪಿಸಿ, ವಂದಿಸಿದರು.