
ಹರಿಹರ .ಮಾ .4; ಮಕ್ಕಳಲ್ಲಿನ ಸುಪ್ತವಾದ ಹಾಗೂ ಕ್ರಿಯಾತ್ಮಕ ನೈಜ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಆಕಾರ್ ಆಧಾರ್ ಸಂಸ್ಥೆಯ ಚಿತ್ರಕಲೆ ಶಿಬಿರವು ಸಹಕಾರಿಯಾಗಿದೆ ಎಂದು ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹೇಳಿದರು.ನಗರದ ಹರಪನಹಳ್ಳಿ ರಸ್ತೆಯಲ್ಲಿರುವ ಆಕಾರ್ ಆಧಾರ್ ಸಂಸ್ಥೆಯು ಆಯೋಜಿಸಿದ್ದ ಹೇಳು ಕೇಳು 28ರ ಫೆಬ್ರವರಿ ತಿಂಗಳ ಕರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ನಾಡು-ನುಡಿ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ ಅವರಲ್ಲಿರುವ ಸುಪ್ತವಾದ ಪ್ರತಿಭೆಗಳನ್ನು ಹೊರತರಲು ಇಂತಹ ಸಂಸ್ಥೆಗಳ ಕರ‍್ಯ ಅವಶ್ಯಕವಾಗಿದೆ . ಬಿಡುವಿನ ಸಮಯದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚಿತ್ರಕಲೆಯಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರನ್ನು ಮಾನಸಿಕವಾಗಿ ಬೆಲೆಸಲು ಸಾಧ್ಯವಾಗುವುದು ಪೋಷಕರು ಮನೆಯಲ್ಲಿ ತಮ್ಮ ಮಕ್ಖಳಲ್ಲಿರುವ ರಚನಾನಾತ್ಮಕ ಚಟುವಟಿಕೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಿದ್ದಲ್ಲಿ ಮಕ್ಕಳು ಸಮಾಜದಲ್ಲಿ ಅಸಾಧಾರಣ ವ್ಯಕ್ತಿಗಳಾಗಿ ಬೆಳೆಯಲು ಸಹಾಯಕವಾಗುವುದು ಎಂದರುಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಪೋಷಕರು ಒತ್ತಡ ಹೇರುವ ಬದಲು ಪೂರಕ ವಾತಾವರಣ ನರ‍್ಮಾಣ ಮಾಡುವುದು ಅಗತ್ಯ. ಎಂದು ಸಂಜೆವಾಣಿ ಪತ್ರಿಕೆಯ ವರದಿಗಾರಾದ ಪಂಚಾಕ್ಷರಿ ಹೇಳಿದರುಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೋಡಿ, ನೀವು ಮಕ್ಕಳಿಗೆ ಏನಾದರೂ ಕೆಲಸ ಹೇಳಿದಾಗ, ಅವರು ಅದಕ್ಕೆ ವಿರುದ್ಧವಾದುದ್ದನ್ನೇ ಮಾಡಲು ಆಸಕ್ತಿ ತೋರುತ್ತಾರೆ. ನಾವು ಹೇಳಿದ್ದನ್ನು ಮಾಡದೇ, ನಾವು ಮಾಡುವುದನ್ನೇ ಅನುಕರಿಸುತ್ತಾರೆ, ಹೌದಲ್ಲವಾ? ಹಾಗಾಗಿ, ಮನೆಯ ಸದಸ್ಯರು ಪ್ರತಿದಿನ ಒಂದು ನರ‍್ದಿಷ್ಟ ಸಮಯದಲ್ಲಿ (ಉದಾಹರಣೆಗೆ ಪ್ರತಿದಿನ ಸಂಜೆ 7 ರಿಂದ 8 ಗಂಟೆ) ನಿಮಗೆ ಇಷ್ಟವಾದ ಯಾವುದಾದರೂ ಒಂದು ಪುಸ್ತಕವನ್ನು ಓದಲು ಪ್ರಾರಂಭಿಸಿ. ಕೆಲವು ದಿನಗಳವರೆಗೆ ಇದನ್ನು ನಿರಂತರವಾಗಿ ಮುಂದುವರಿಸಿ. ಆಗಲೂ ನೀವು ಮಗುವಿಗೆ ಓದಲು ಹೇಳಬೇಡಿ, ಒತ್ತಾಯವನ್ನೂ ಮಾಡಬೇಡಿ. ನಿಮ್ಮ ಪಾಡಿಗೆ ಓದುವುದನ್ನು ಮುಂದುವರಿಸಿ. ಆರಂಭದ ಕೆಲವು ದಿನಗಳಲ್ಲಿ ಮಕ್ಕಳು ನಿಮ್ಮ ಈ ಓದುವಿಕೆಯನ್ನು ಗಮನಿಸದಿರಬಹುದು. ಆದರೆ, ನಂತರದಲ್ಲಿ ಗಮನಿಸಲು ಪ್ರಾರಂಭಿಸುತ್ತಾರೆ. ನಂತರ ಅವರು ನಿಮ್ಮನ್ನು ಅನುಕರಿಸುತ್ತಾರೆ. ತಮ್ಮಷ್ಟಕ್ಕೆ ತಾವೇ ನಿಮ್ಮ ಬಳಿ ಬಂದು ಕುಳಿತು ಓದಲು ಶುರು ಮಾಡುತ್ತಾರೆ.ಮಕ್ಕಳ ಮೇಲಿನ ನಿಯಂತ್ರಣ ಕಡಿಮೆ ಮಾಡಿ ಮಕ್ಕಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿಮಕ್ಕಳನ್ನು ಕಲೆಯತ್ತ ನಡೆಸಿ ಬೆಳೆಸಿ ಇದರಿಂದ ಮಕ್ಕಳು ಏಕಾಗ್ರತೆ ಹೊಂದಿ ಕಲೆಯಲ್ಲಿ ಬಲಿಷ್ಟವಾಗಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕೆಂದರು ಪ್ರತಿಯೊಬ್ಬ ಮಗುವಿಲ್ಲಿಯೂ ಒಬ್ಬ ಕಲಾವಿದ ಇರುತ್ತಾನೆ. ಮಕ್ಕಳಲ್ಲಿನ ಅಭಿಲಾಷೆಗಳನ್ನು ಅರಿತು ಅವರಿಗೆ ಅವಕಾಶ ನೀಡಿದಾಗ ಮಾತ್ರ ಆ ಕಲೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ಕಲೆ ಮಕ್ಕಳ ಭಾವನೆಗಳನ್ನು ಅರಳಿಸುತ್ತದೆ.ಮಕ್ಕಳನ್ನು ಕಲೆಯತ್ತ ನಡೆಸಿ ಬೆಳೆಸಿ ಇದರಿಂದ ಮಕ್ಕಳು ಏಕಾಗ್ರತೆ ಹೊಂದಿ ಕಲೆಯಲ್ಲಿ ಬಲಿಷ್ಟವಾಗಲು ಸಾಧ್ಯವಾಗುತ್ತದೆ. ಮಕ್ಕಳ ಮನೋಸ್ಥಿತಿಯನ್ನು ಅರಿಯಲು ಕಲೆ ಬಹು ಮುಖ್ಯವಾಗಿದೆ. ನೃತ್ಯ, ಸಂಗೀತ, ನಾಟಕದಂತಹ ಕಲೆಗಳಿಂದ ಪ್ರತಿಯೊಬ್ಬ ಮಗು ಸತ್ಪ್ರಜೆಯಾಗಲು ಸಾದ್ಯ ಕಲೆ ಮಾನವನನ್ನು ದೈವತ್ವಕ್ಕೆ ತೆಗೆದುಕೊಂಡು ಹೋಗುತ್ತದೆ. ಈ ಕಲೆ ಮಕ್ಕಳನ್ನು ಆಸ್ವಾದಿಸಿ, ಮನಸ್ಸು ಪ್ರಪುಲ್ಯವಾಗಿ ಓದಿನ ಕಡೆಗೆ ಮಕ್ಕಳ ಮನಸ್ಸನ್ನು ತುಡಿಯುವಂತೆ, ಮಿಡಿಯುವಂತೆ ಮಾಡುತ್ತದೆ. ಮನಸ್ಸು ತೃಪ್ತಿಕರವಾಗುತ್ತದೆ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲೆಯ ಬಗ್ಗೆ ಅರಿವು ಮೂಡಿಸಿದರೆ ಮುಂದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಕಾರ ಸಂಸ್ಥೆಯ ಅಧ್ಯಕ್ಷ ಎಂ ರಾಮು ಪೋಷಕರಿಗೆ ಕಿವಿಮಾತು ಹೇಳಿದರುದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ಚಿತ್ರ ಸಂತೆ ಕರ‍್ಯಕ್ರಮದಲ್ಲಿ ಆಕಾರ ಸಂಸ್ಥೆಯ ವಿದ್ಯರ‍್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಕಾರ‍್ಯದರ್ಶಿ ಸೌಮ್ಯ ರಾಮು. ಸಿದ್ದಪ್ಪ ಎಸ್ ಕೆ. ರಾಜೇಶ್ ರಾಜಪಲ್ಲಿ. ಈರಮ್ಮ. ಪ್ರಕಾಶ್ ಟಿ ಲಮಾಣಿ. ನಕ್ಷತ್ರ ಟಿವಿ ಸಂಪಾದಕ ಕೃಷ್ಣ ಪಿ ರಾಜೋಳ್ಳಿ. ಆಕಾರ ಆಧಾರ್ ಸಂಸ್ಥೆಯವರು ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು.