
ಕಲಬುರಗಿ:ಮಾ.11: ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಸಂಯುಕ್ತಾಶ್ರಯದಲ್ಲಿ ಮಾರ್ಚ್ 14ರಂದು ಪೇಠಶಿರೂರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದೃಶ್ಯಕಲೆ: ಚಿಂತನ-ಮಂಥನ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ., ಅವರು ತಿಳಿಸಿದ್ದಾರೆ.
ವಿಚಾರ ಸಂಕಿರಣವನ್ನು ಅಂದು ಬೆಳ್ಳಿಗೆ 10:30 ಗಂಟೆಗೆ ಹಿರಿಯ ಚಿತ್ರಕಲಾವಿದ ಬಸವರಾಜ್ ಎಲ್. ಜಾನೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಚಿತ್ರಕಲಾವಿದ ಚಂದ್ರಹಾಸ್ ವ್ಹಾಯ್. ಜಾಲಿಹಾಳ್, ಪೇಠಶಿರೂರದ ಸರ್ಕಾರಿ ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಬಾಬನಕರ್ ಅವರು ಆಗಮಿಸುವರು. ಪೇಠಶಿರೂರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಾಲ್ ಅಹ್ಮದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬೆಳಿಗ್ಗೆ 11:15ರಿಂದ ಮಧ್ಯಾಹ್ನ 12:15 ಗಂಟೆಯವರೆಗೆ ನಡೆಯುವ ಮೊದಲನೆಯ ಗೋಷ್ಠಿಯಲ್ಲಿ ಮಕ್ಕಳ ಕಲಿಕೆಗೆ ದೃಶ್ಯಕಲೆಯ ಅಗತ್ಯತೆ’ ಕುರಿತು ಕಲಾವಿದರು ಮತ್ತು ನಿರ್ದೇಶಕ ಅರುಣ್ ಬಿ. ಟಿ, ಗೊಪ್ಪೇನಹಳ್ಳಿ ಅವರು ಮಾತನಾಡುವರು. ಮಧ್ಯಾಹ್ನ 12:15ರಿಂದ 01:15ರವರೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ‘ಮಕ್ಕಳ ಮಾನಸಿಕ ಬೆಳವಣಿಗೆಗಾಗಿ ಚಿತ್ರಕಲಾ ಚಟುವಟಿಕೆಗಳು’ ಕುರಿತು ಹಿರಿಯ ಚಿತ್ರಕಲಾವಿದೆ ಮತ್ತು ಕೃತ್ತಿಕ ಸಾಂಸ್ಕøತಿಕ ಸಂಸ್ಥೆ ಕಾರ್ಯದರ್ಶಿಗಳಾದ ಶ್ರೀಮತಿ ಮಂಜುಳಾ ಬಿ. ಜಾನೆ ಅವರು ಮಾತನಾಡುವರು ಎಂದು ಅವರು ತಿಳಿಸಿದ್ದಾರೆ.
ಮಧ್ಯಾಹ್ನ 02:15ರಿಂದ 03:15ರವರೆಗೆ ನಡೆಯುವ ಮೂರನೇ ಗೋಷ್ಠಿಯಲ್ಲಿ ಮಕ್ಕಳ ಕಲಿಕೆಯಲ್ಲಿ ಸ್ಥಳೀಯ ಜಾನಪದ ಕಲೆಗಳ ಪಾತ್ರ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ದಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಬಿ. ಕಟ್ಟಿ ಅವರು ಮಾತನಾಡುವರು. ಮಧ್ಯಾಹ್ನ 03:15ರಿಂದ 04:15ರವರೆಗೆ ನಡೆಯುವ ನಾಲ್ಕನೇ ಗೋಷ್ಠಿಯಲ್ಲಿ ಮಕ್ಕಳ ಚಲನಚಿತ್ರಗಳು ಕುರಿತು ಪೇಠಶಿರೂರದ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ್ ನಂದೂರ್ ಅವರು ಮಾತನಾಡುವರು ಎಂದು ಅವರು ಹೇಳಿದ್ದಾರೆ.