ಮಕ್ಕಳ ದಿನಾಚರಣೆ: ಸ್ಪರ್ಧೆ

ಧಾರವಾಡ, ನ14: ಜೆ.ಎಸ್.ಎಸ್. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಮುನ್ನಾದಿನ ಮಕ್ಕಳಿಗಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೀರ ಮರಣ ಹೊಂದಿದ ಶೌರ್ಯ ಪ್ರಶಸ್ತಿ ಪುರಸೃತ ವೀರ ಸೈನಿಕರ ಸ್ಮರಣಾರ್ಥವಾಗಿ ಚಿತ್ರ ಬಿಡಿಸುವ ಸ್ಪರ್ಧೆ, ವೀರರ ಜೀವನ ಕುರಿತು ಕವಿತಾ ಸ್ಪರ್ಧೆ ಹಾಗೂ “ದೇಶಕ್ಕಾಗಿ-ನೀನೇನು ಮಾಡ ಬಯಸುತ್ತೀಯ” ಎನ್ನುವ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
1ನೇ ತರಗತಿಯಿಂದ 10ನೇ ತರಗತಿಯವರೆಗೆ ಆಯೋಜಿಸಿದ್ದ ಈ ಮೂರು ಸ್ಪರ್ಧೆಗಳಲ್ಲಿ ಸುಮಾರು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.