ಮಕ್ಕಳ ದಿನಾಚರಣೆ : ವೈಷ್ಣವಿ ದೇಶಪಾಂಡೆಯಿಂದ ಸಂಗೀತ ಕಾರ್ಯಕ್ರಮ

ರಾಯಚೂರು,ನ.೧೫- ಮಕ್ಕಳಲ್ಲಿರುವ ಕಲೆ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟರೆ ಉನ್ನತ ಸ್ಥಿತಿಗೆ ಬೆಳೆಯಲು ಸಾಧ್ಯ ಹಾಗೂ ಇನ್ನೊಬ್ಬರಿಗೆ ಪ್ರೋತ್ಸಾಹ ಹಾಗೂ ಉತ್ತೇಜನವನ್ನು ಸಹಕರಿಸುತ್ತದೆ ಎಂದು ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವೈಷ್ಣವಿ ದೇಶಪಾಂಡೆ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಇದ್ದರೆ ರಾಯಚೂರಿನ ಹೆಸರನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಾಧ್ಯವಾಗುತ್ತದೆ. ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಇಂತಹ ವೇದಿಕೆ ಕಲ್ಪಿಸಿಕೊಟ್ಟ ನನ್ನಂತಹ ಇನ್ನು ಎಷ್ಟು ಕಲಾವಿದರು ನಿರೀಕ್ಷೆಯಲ್ಲಿದ್ದಾರೆ ಅವರಿಗೂ ವೇದಿಕೆ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದರು.
ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ ಸುಬ್ರಹ್ಮಣ್ಯ ತೆರಿಗೆ ಸಲಹೆಗಾರರು ಮಾತನಾಡಿ,ಶಂಕರಮಠ ಚಿಕ್ಕದಾಗಿ ಪ್ರಾರಂಭಗೊಂಡು ಇಂದು ಉತ್ತಮ ಸುಸಜ್ಜಿತ ಕಲ್ಯಾಣ ಮಂಟಪ ಸಭಾಭವನ ಹಾಗೂ ಸಕಲ ಭಕ್ತರನ್ನೊಳಗೊಂಡು ಉತ್ತಮ ಸಾಧನೆ ದಾರಿಮಾಡಿಕೊಟ್ಟಿದೆ ಇನ್ನು ಮುಂದೆ ಸಂಸ್ಕೃತ ಪಾಠಶಾಲೆ ಪ್ರಾರಂಭಿಸುವ ಉದ್ದೇಶ ಹೊಂದಿದ್ದು ಶಿಕ್ಷಕರಿಗೆ ಪಾಲಕರು ಹಾಗೂ ಮಕ್ಕಳಿಗೆ ಸಂಸ್ಕೃತ ಪ್ರಾರಂಭಿಸುವ ಉದ್ದೇಶವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಠದ ವ್ಯವಸ್ಥಾಪಕ ಕೃಷ್ಣಮೂರ್ತಿ ಹೆಬಸೂರು ಶ್ರೀ ಆನಂದೇಶ್ವರ ಕೃಪೆಯಿಂದ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುತ್ತಿದ್ದು ಕಾರ್ತಿಕ ಮಾಸದ ಅಂಗವಾಗಿ ಆನಂದೇಶ್ವರ ರುದ್ರಾಭಿಷೇಕ ಅಲಂಕಾರ ನಡೆಯುತ್ತಿದ್ದು ಪ್ರತಿನಿತ್ಯ ಸುಮಾರು ಬಂದು ಆನಂದೇಶ್ವರ ಸ್ವಾಮಿಯ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈಷ್ಣವಿ ದೇಶಪಾಂಡೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಕ್ತಾ ಎರ್ನಾಲ್ಕರ್, ಕೋಮಲ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಮಾರಿ ವೈಷ್ಣವಿ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸಕಲ ಸದ್ಭಕ್ತರ ಹಾಗೂ ಸಂಗೀತ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.