ಮಕ್ಕಳ ದಿನಾಚರಣೆ: ರಂಗೋಲಿ ಸ್ಪರ್ಧೆ

ಕುಂದಗೋಳ ನ. 15 : ಪಟ್ಟಣದ ಶಿವಾನಂದ ಮಠದಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಶಿವಾನಂದ ಮಠದ ಶ್ರೀ ಮಹಾಂತ ಸ್ವಾಮೀಜಿ ಅವರು ಸ್ವಸ್ತಿಕ ಚಿನ್ನೆಯ ರಂಗೋಲಿ ರಚಿಸುವ ಮೂಲಕ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದರು.
ಪಟ್ಟಣದ ಶಿವಾನಂದ ಮಠದಲ್ಲಿ ವಿವಿಧ ಹೈಸ್ಕೂಲ್ ಶಾಲೆಯ ಹೆಣ್ಣು ಮಕ್ಕಳಿಗಾಗಿ ವಿವಿಧ ಬಗೆಯ ರಂಗೋಲಿ ಸ್ಪರ್ಧೆ ಜರಗಿತು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಆರ್.ಎನ್.ಕಮತದ, ಕಾರ್ಯದರ್ಶಿ ಆರ್. ಬಿ. ಗೋಡಿ, ಖಜಾಂಚಿ ದಾನಪ್ಪ ಗಂಗಾಯಿ,ರೋಟರಿ ಸಂಸ್ಥೆಯ ಸದಸ್ಯ ಸಿ. ಜಿ. ಹಿರೇಮಠ,ಎಸ್. ಎಚ್.ಪಾಟೀಲ, ಅಶೋಕ ಪಾಳಂದೆ, ರುದ್ರಪ್ಪ ಕಿರೇಸೂರ, ಡಾ.ಟಿ ಡಿ.ಪಾಟೀಲ, ನಿರಂಜನ ಮಣಕಟ್ಟಿಮಠ ಸೇರಿದಂತೆ ಅನೇಕರಿದ್ದರು.