ಮಕ್ಕಳ ದಿನಾಚರಣೆ : ಉಚಿತ ನೋಟ್ ಬುಕ್ ವಿತರಣೆ

ರಾಯಚೂರು,ನ.೧೪- ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಮೈಲಾರ ನಗರ ವಾರ್ಡ್ ನ ೨೮ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಪ್ಪು ಯೂಥ್ ಬ್ರಿಗೇಡ್ ಮತ್ತು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸಾಧಿಕ್ ಖಾನ್,ಹೊಸೂರ್ ರಾಮು, ಸರ್ಫಾರಾಜ್, ಇರ್ಷಾದ್, ಹೊಸೂರ್ ನಾಸೀರ್, ಸಂತೋಷ್,
ಶಾಲೆಯ ಮುಖ್ಯ ಗುರುಗಳು ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.