ಮಕ್ಕಳ ದಿನಾಚರಣೆ ಅಂಗವಾಗಿ ಆರ್ಮಿ ಶಾಲೆಯಲ್ಲಿ ಕಾಡು ಉತ್ಸವ

ಕಲಬುರಗಿ,ನ.16: ನಗರದ ಕಲಬುರಗಿ ಆರ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾಡು ಉತ್ಸವವನ್ನು ಹಮ್ಮಿಕೊಳ್ಳಲಾಯಿತು.

ಶಾಲೆಯಲ್ಲಿ, ಕಾಡಿನಲ್ಲಿ ವಾಸ ಮಾಡುವ ಎಲ್ಲಾ ರೀತಿಯ ಗಿಡಗಳು, ಪ್ರಾಣಿಗಳು, ಪಕ್ಷಿಗಳು, ಹಕ್ಕಿಗಳನ್ನು ಕೈಯಿಂದ ಮಾಡಿ ಕಾಡಿನ ವಾತಾವರಣ ಸೃಷ್ಟಿಸಲಾಯಿತು. ಈ ಕಾಡು ಉತ್ಸವವನ್ನು ವೀಕ್ಷಣೆ ಮಾಡಿ ವಿದ್ಯಾರ್ಥಿಗಳು ಆನಂದಿಸಿದರು.

ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಓಗಿ, ವಿನೋದ್ ದೇವಣಿ, ಶಾಲೆಯ ಮುಖ್ಯಗುರುಗಳಾದ ರೋಹಿಣಿ ಪಂಚಬಾಯಿ, ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.