ಮಕ್ಕಳ ದಿನದಂದೇ ದುರಂತ ಮೂವರು ಮಕ್ಕಳು ಶವವಾಗಿ ಪತ್ತೆ

ಕೊಡಗು,ನ.14-ಮಕ್ಕಳ ದಿನಾಚಾರಣೆ ದಿನದಂದೇ ನಡೆದ ದುರಂತದಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಕುಶಾಲನಗರದ ಸಮೀಪ ತೊರೆನೂರು ಬಳಿ ನಡೆದಿದೆ.
ತೊರೆನೂರು ಬಳಿಯ ಹಾರಂಗಿ ಎಡೆದಂಡೆ ನಾಲೆ ಬಳಿ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದಾರೆ. ನಾಲೆಯಲ್ಲಿ ಮೃತದೇಹ ತೇಲಿ ಬರುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರು ಮೃತದೇಹಗಳನ್ನು ನಾಲೆಯಿಂದ ಮೇಲೆತ್ತಿದ್ದಾರೆ.
ಮೂವರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿಯೋ ಇಲ್ಲವೇ ಮಕ್ಕಳೇ ಆಟವಾಡಲು ಹೋಗಿ ಕಾಲು ಜಾರಿ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಸ್ಪಷ್ಟತೆ ಬರಬೇಕಿದೆ.ಇನ್ನು ಮೃತ ಮಕ್ಕಳ ಮೂಲ ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.