ಮಕ್ಕಳ ಜೊತೆ ಬೆರೆತು ಮಕ್ಕಳಂತಾದ ನೀತಿ ಆಯೋಗದ ಅಧಿಕಾರಿಗಳು

ಯಾದಗಿರಿ: ಜು, 17; ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆಯಡಿಯಲ್ಲಿ ಆಯ್ಕೆಯಾದ ಯಾದಗಿರಿ ಜಿಲ್ಲೆಗೆ ಕೇಂದ್ರದ ನೀತಿ ಆಯೋಗದ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ನೀತಿ ಆಯೋಗದ ಸಿಇಓ ಪರಮೇಶ್ವರನ್ ಅಯ್ಯರ್, ಮಿಷನ್ ನಿರ್ದೇಶಕ ರಾಕೇಶ ರಂಜನ್, ಪ್ರಭಾರಿ ಅಧಿಕಾರಿ ಎಂ ಮಹೇಶ್ವರ್ ರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಪಿ ಅಶೋಕ್ ಬಾಬು ಅವರು ದೋರನಹಳ್ಳಿ ಅಂಗನವಾಡಿ ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ಗುಲಾಬಿ ಹೂ ನೀಡುವ ಮೂಲಕ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳಿಗೆ ಸ್ವಾಗತ ಕೋರಿದರು. ಅಂಗನವಾಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡಿ ಆನಂದಿಸಿ, ಮಕ್ಕಳ ಜೊತೆ ಸೇರಿ ಶಾಲಾ ಪೂರ್ವ ಶಿಕ್ಷಣದಲ್ಲಿ ಭಾಗವಹಿಸಿ,ಹಾಡುಗಳನ್ನು ಹಾಡಿ, ಮಕ್ಕಳ ಜೊತೆ ಬೆರೆತು ಮಕ್ಕಳಂತಾಗಿ .ಮಕ್ಕಳ ಶಾಲಾ ಪೂರ್ವ ಚಟುವಟಿಕೆಗಳನ್ನು ಸಹ ವೀಕ್ಷಿಸಿದರು.

 ಮಕ್ಕಳಿಗಾಗಿ ಪೌಷ್ಟಿಕಾಂಶ ಆಹಾರ ತಯಾರಿಸಿದ ರಾಗಿ ಪುಷ್ಟಿ, ದಾಲ್ ಖಿಛಿಡಿ, ನ್ಯೂಟ್ರಿ ಮಿಕ್ಸಿ, ಶೇಂಗಾ ಉಂಡಿ - ಇವೆಲ್ಲವು 3 ರಿಂದ 6 ವರ್ಷದ ಮಕ್ಕಳಿಗಾಗಿ ಮತ್ತು ಗರ್ಭಿಣಿ, ಬಾಣಂತಿ ಇವರಿಗಾಗಿ ಮಾಡಿರುವ ಆಹಾರ ಪದಾರ್ಥವನ್ನು ವೀಕ್ಷಿಸಿ, ರುಚಿ ನೋಡಿ ಸವಿದರು ಮತ್ತು ಜೊತೆಗಿರುವ ಎಲ್ಲಾ ಅಧಿಕಾರಿಗಳಿಗೂ ತಿನ್ನಿಸಿದರು.
 ಅಂಗನವಾಡಿಯಲ್ಲಿ ಇರುವ ಮಕ್ಕಳ ಬೆಳವಣಿಗೆ ರಿಜಿಸ್ಟರ್, ಕುಟುಂಬದ ವಿವರಗಳು ರೆಜಿಸ್ಟರ್,ಶಾಲಾಪೂರ್ವ ಶಿಕ್ಷಣರೆಜಿಸ್ಟರ್,ಮನೆಗೆ ಭೇಟಿ ನೀಡುವ ಯೋಜಕಗಳು ,ಮಕ್ಕಳ ತೂಕದ ದಾಖಲೆಗಳನ್ನು ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲನೆ ಮಾಡಿದರು.
 ಅಂಗನವಾಡಿಯಲ್ಲಿಯೇ ತಯಾರಿಸಿರುವ ಶೇಂಗಾ ಉಂಡಿಯನ್ನು ನೀತಿ ಆಯೋಗದ ಅಧಿಕಾರಿಗಳು ತೆಗೆದುಕೊಂಡು ಹೋದರು. ಒಟ್ಟಿನಲ್ಲಿ ಅಂಗನವಾಡಿ ಶಾಲೆಯ ಶೇಂಗದ ಹುಂಡಿ ದೆಹಲಿಗೆ ಹೋಯಿತು ಎಂದು ಅಧಿಕಾರಿಗಳೆಲ್ಲ ಖುಷಿಪಟ್ಟರು.
 ಆನಂತರ ಶಹಾಪೂರ ತಾಲೂಕಿನ ದೋರನಹಳ್ಳಿ ಎಮ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ

ಈ ಸಂಸ್ಥೆಯಲ್ಲಿನ ಮುರ್ರಾ ತಳಿಯ ಎಮ್ಮೆಗಳ ನಿರ್ವಹಣೆ ಬಗ್ಗೆ, ಮೇವಿನ ಬೆಳೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರೈತರಿಗೆ ಎಮ್ಮೆಗಳ ಕೃತಕ ಗರ್ಭಧಾರಣೆ ಪ್ರಾಮುಖ್ಯತೆ, ಎಮ್ಮೆಗಳ ಸಾಕಾಣಿಕೆ ಬಗ್ಗೆ ಅರಿವು ಮೂಡಿಸಲು ಇನ್ನಷ್ಟು ತರಬೇತಿಗಳನ್ನು ಆಯೋಜಿಸಿ, ಜಾನುವಾರುಗಳಿಗೆ ಮೇವು ಬೆಳೆಸುವ ಪದ್ದತಿಗಳ ಬಗ್ಗೆ ಮಾಹಿತಿಯನ್ನು ಜಿಲ್ಲೆಯಲ್ಲಿನ ರೈತರಿಗೆ ತಿಳಿಸಬೇಕು ಎಂದು ಕೇಂದ್ರದ ಅಧಿಕಾರಿಗಳು ನಿರ್ದೇಶನ ನೀಡಿದರು.
 ಆದರ್ಶ ಮಹಾವಿದ್ಯಾಲಯಕ್ಕೆ ಭೇಟಿ; ಶಹಾಪೂರ ಆದರ್ಶ ವಿದ್ಯಾಲಯ ಶಾಲೆಗೆ ಭೇಟಿ ನೀಡಿ ಕೃತಕ ಬುದ್ಧಿವಂತಿಕೆ (ಂಡಿಣiಜಿiಛಿiಚಿಟ iಟಿಣeಟಟigeಟಿಛಿe ) ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ ಮಾಡಿ ಮಕ್ಕಳೊಂದಿಗೆ ಸಂವಾದ ಮಾಡಿದರು. ಶಾಲೆಯ ಮೂಲಭೂತ ಸೌಲಭ್ಯಗಳು ಶಾಲೆಯ ಫಲಿತಾಂಶ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸೆ ಮಾತುಗಳನ್ನು ಆಡಿದರು.
 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗರಿಮಾ ಪನ್ವಾರ್, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ್, ಡಿಡಿಪಿಐ ಶಾಂತಗೌಡ ಪಾಟೀಲ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.