ಮಕ್ಕಳ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಸೇಡಂ ಸರ್ಕಾರಿ ಆಸ್ಪತ್ರೆ, ಡಾಕ್ಟರ್ಸ್ ಜಿಲ್ಲೆಯಲ್ಲಿ ಪ್ರಥಮ : ಡಾ.ಶರಣಬಸಪ್ಪ ಕ್ಯಾತನಾಳ ಬಣ್ಣನೆ

ಸೇಡಂ, ಫೆ,17 : ತಾಲೂಕಾ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ತೀವ್ರ ಪೌಷ್ಟಿಕ ಮಕ್ಕಳು, ಅಪೌಷ್ಟಿಕ ಮಕ್ಕಳು ಹೃದಯ ರೋಗ, ಕಿವಿ ಮೂಗು ಕಣ್ಣುಗಳ ರೋಗ, ರಕ್ತ ಹೀನತೆ, ಸೇರಿದಂತೆ ಹಲವು ರೋಗಗಳ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳುವ ಜೊತೆಗೆ ಮಕ್ಕಳ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಸೇಡಂ ಸರ್ಕಾರಿ ಆಸ್ಪತ್ರೆ ಮತ್ತು ಡಾಕ್ಟರ್ಸ್ ಗಳು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಎಂದು ಕಲಬುರ್ಗಿ ಜಿಲ್ಲಾ ಆರ್ ಸಿ ಎಚ್. ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ಮೆಚ್ಚಿಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿರುವ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯ ಸೇಡಂ ಅವರ ಸಂಯುಕ್ತ ಆಶ್ರಮದಲ್ಲಿಂದು ಶಾಲಾ ಮತ್ತು ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಅಂಗವಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಭಿಯಾನಕ್ಕೆ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆಯಲ್ಲಿ ಡಾ. ನಾಗರಾಜ ಮನ್ನೆ, ಡಾ.ಸಂಜೀವಕುಮಾರ ಪಾಟೀಲ್, ಡಾ. ಸದಾಶಿವ ದೇವಪ್ಪ, ಡಾ. ಪ್ರಣೆಯ, ಡಾ. ನಾಗನಾಥ ಹೇಬಳ್ಳೆ, ಡಾ. ಶ್ರೀ ದೇವಿ,ಡಾ. ಸದಾನಂದ ರೆಡ್ಡಿ ಶೇರಿ, ಡಾ.ಪ್ರವೀಣ್ ಜೋಶಿ, ಡಾ. ನಾಗರತ್ನ,ಡಾ.ರೋಹಿಣಿ , ಡಾ.ದೀಪಿಕಾ, ಡಿ.ಇ.ಐ.ಸಿ ಜಿಲ್ಲಾ ವ್ಯವಸ್ಥಾಪಕರು ಕೃಷ್ಣ ಎಸ್ ವಗ್ಗೆ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಇದ್ದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಭಿಯಾನದಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮಕ್ಕಳ ಆರೋಗ್ಯ ತಪಾಸಣೆಯನ್ನು ಒಂದೇ ದಿನದಲ್ಲಿ 275 ಮಕ್ಕಳಲ್ಲಿ ವಿವಿಧ ರೋಗಗಳ ಕಂಡುಬಂದಿದ್ದು ನಿಯಂತ್ರಣಕ್ಕೆ ಪಾಲಕರಿಗೆ ಔಷಧಿ ವಿತರಣೆ ಮಾಡಲಾಗಿದೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲು ತಿಳಿಸಿರುವೆ.
ಡಾ.ಶರಣಬಸಪ್ಪ ಕ್ಯಾತನಾಳ
ಜಿಲ್ಲಾ ಆರ್ ಸಿ ಎಚ್. ಅಧಿಕಾರಿಗಳು ಕಲಬುರ್ಗಿ