ಮಕ್ಕಳ ಜವಾಬ್ದಾರಿ ನಮ್ಮೆಲ್ಲರ ಹೊಣೆ

ಕಲಬುರಗಿ,ಜು.24-ಮಕ್ಕಳು ಎಷ್ಟೇ ವಯಸ್ಸಿನವರಾದರು ಅವರನ್ನು ಜವಾಬ್ದಾರಿಯತೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ನವೀನ್ ಕುಮಾರ್. ಯು. ಹೇಳಿದರು.
ನಗರದ ಆಳಂದ ಕಾಲೋನಿಯ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಯುನಿಸೆಫ್ ಸಂಯುಕ್ತಾಶ್ರಯದಲ್ಲಿ ಮಕ್ಕಳ ಪಾಲನಾ ಸಂಸ್ಥೆಯಲ್ಲಿದ್ದು 18 ವರ್ಷ ಪೂರೈಸಿದ ಮಕ್ಕಳಿಗೆ ಅನುಪಾಲನ ಸೇವೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಿಂದ ಸಮಾಜಕ್ಕೆ ಪುನರ್ ಸಂಯೋಜನೆಗೊಳ್ಳುತ್ತಿರುವ ಯುವಜನರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ದಾಟಿದ ಮೇಲೆಯೂ ಮಕ್ಕಳನ್ನು ಜವಾಬ್ದಾರಿ ನೋಡಿಕೊಳ್ಳ ಬೇಕು ಜೀವನದಲ್ಲಿ ಯಶಸ್ಸನ್ನು ಪಡೆಯಲು ಮಾರ್ಗದರ್ಶನ ನೀಡಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಯಲ್ಲಾಲಿಂಗ ಕಾಳನೂರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಸೇರಿದಂತೆ ಕರ್ನಾಟಕ ಸರಕಾರದ ಯುನಿಸೆಫ್ ನೆರವು ಯೋಜನೆಯ ತಾಂತ್ರಿಕ ಸಲಹಾ ಸಂಪನ್ಮೂಲ ವ್ಯಕ್ತಿ ಸಿಸ್ಟರ್ ಡ್ಯೂಲ್ಸಿನ್ ಕ್ರಾಸ್ಟ ಹಾಗೂ ಹರೀಶ್ ಜೋಗಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಸ್ಟರ್ ಡ್ಯೂಲ್ಸಿನ್ ಕ್ರಾಸ್ಟ ಅವರು, ಸಂಸ್ಥೆಯಿಂದ ಹೊರಗೆ ಹೋದ ಮಕ್ಕಳ ಸುರಕ್ಷತೆ ಮತ್ತು ಜೀವನ ಶೈಲಿ ಬಹಳ ಮುಖ್ಯ, ಅವರನ್ನು ಒಂದು ವೇದಿಕೆಯಲ್ಲಿ ತಂದು ಸಂಘವನ್ನು ರಚಿಸಿ ಬೆಂಬಲವನ್ನು ನೀಡುವ ಉದ್ದೇಶದಿಂದ ಸದರಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಯಲ್ಲಾಲಿಂಗ ಕಾಳನೂರ ಮಾತನಾಡಿ, ಈ ರೀತಿಯ ತರಬೇತಿ ಈ ಮಕ್ಕಳಿಗೆ ತುಂಬಾನೆ ಅವಶ್ಯಕತೆ ಇತ್ತು, ಇದರ ಉಪಯೋಗ ಪಡೆಯುವಂತೆ ಶಿಭಿರಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಮಲ್ಲಣ್ಣ ದೇಸಾಯಿ ಮಾತನಾಡಿ,ಮಕ್ಕಳ ರಕ್ಷಣಾ (ಪೆÇೀಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಕಲಂ 46 ರನ್ವಯ ಹಾಗು ಮಾದರಿ ನಿಯಮಗಳು 2016 ಕಲಂ 25 ರನ್ವಯ ಸಂಸ್ಥೆಯಲ್ಲಿದ್ದು 18 ವರ್ಷದ ನಂತರ ಹೊರ ಹೋದ ಮಕ್ಕಳ ಜವಾಬ್ದಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜವಾಬ್ದಾರಿಯಾಗಿದೆ ಎಂದರು.
ಬಾಲನ್ಯಾಯ ಮಂಡಳಿಯ ಸದಸ್ಯರಾದ ಲಿಯಾಕತ ಫರಿದ್ ಮಾತನಾಡಿದರು, ಯುನಿಸೆಫ್ ನ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳು ಹಾಗೂ ಯುನಿಸೆಫ್ ನ ವಿಭಾಗೀಯ ಸಂಯೋಜಕರು ಅನುಪಾಲನ ಸೇವೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಿಂದ ಸಮಾಜಕ್ಕೆ ಪುನರ್ ಸಂಯೋಜನೆಗೊಳ್ಳುತ್ತಿರುವ ಯುವಕ ಯುವತಿಯರ ಸಂಘದ ಬಗ್ಗೆ ತರಬೇತಿ ನೀಡಿದರು.
ಈ ಸಂಧರ್ಭದಲ್ಲಿ ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು ಅಂಬಿಕಾ ಒಗಿ, ಶಿವಾನಂದಮ್ಮ, ನಾಜಿಮ್, ಭೀಮಬಾಯಿ, ಚಂದ್ರಕಾಂತ್ ಹಿರೇಮಠ್, ನಾಗಮ್ಮ, ಕರುಣ ಟ್ರಸ್ಟ್ ನ ಪರಶುರಾಮ ರವರು ಹಾಗೂ ಯುನಿಸೆಫ್ ನ , ತನುಜ ಮತ್ತು ಗಿರೀಶ್ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಚಂದ್ರಕಾಂತ್ ಬಿರಾದಾರ್ , ಸುಧಾ ಪಾಳ , ಹಾಗೂ ರಕ್ಷಣಾಧಿಕಾರಿಗಳು ಬಸವರಾಜ್ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಪಾಲನಾ ಸಿಬ್ಬಂದಿಗಳಿದ್ದರು.
ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭಾರತೇಶ್ ಬಿ. ಶೀಲವಂತ ಕಾರ್ಯಕ್ರಮ ನಿರೂಪಿಸಿದರು. ರಕ್ಷಣಾಧಿಕಾರಿ ಮಂಜುಳಾದೇವಿ ವಂದಿಸಿದರು.