ಮಕ್ಕಳ ಚಿಕಿತ್ಸೆಗೆ ಮಿಡಿದ ಸಮಾಜ: ಆರು ಕಂದಮ್ಮಗಳಿಗೆ ಮರುಹುಟ್ಟು

ಮಂಗಳೂರು, ಮಾ.೨೬- ಮಂಗಳೂರು: ಕೋವಿಡ್-೧೯ ಸಾಂಕ್ರಾಮಿಕದಿಂದಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಮತ್ತು ಇತರ ಮೂಲಗಳಿಂದ ಹಣ ಸಂಗ್ರಹಿಸಿ ಆರು ಮಕ್ಕಳಿಗೆ ಅನಿವಾರ್ಯವಾಗಿದ್ದ ಯಕೃತ್ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ
ಬೆಂಗಳೂರಿನ ಆಸ್ಟರ್ ಆರ‍್ವಿ ಆಸ್ಪತ್ರೆ ಇವರಿಗೆ ಮರುಹುಟ್ಟು ನೀಡಿದೆ.
ಸಿಎಸ್‌ಆರ್ ನಿಧಿಯಿಂದ ೨೦ ಲಕ್ಷ, ಆಸ್ಪತ್ರೆಯಿಂದ ಸಬ್ಸಿಡಿಯಾಗಿ ೨೫ ಲಕ್ಷ ಮತ್ತು ಕ್ರೌಡ್‌ಫಂಡಿಂಗ್‌ನಿಂದ ೭೫ ಲಕ್ಷ ರೂಪಾಯಿಗಳನ್ನು ಕ್ರೋಢೀಕರಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಎಚ್‌ಪಿಬಿ ವಿಭಾಗದ ಮುಖ್ಯ ತಜ್ಞವೈದ್ಯ ಮತ್ತು ಕಸಿ
ಶಸ್ತ್ರಚಿಕಿತ್ಸಕ ಡಾ.ರಾಜೀವ್ ಲೋಚನ್ ವಿವರಿಸಿದ್ದಾರೆ.
ಕೋವಿಡ್ ಕಾರಣದಿಂದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಸೀಮಿತವಾಗಿದ್ದ ಅವಧಿಯಲ್ಲಿ ಧೀರ್ಘಕಾಲದ ಯಕೃತ್ ವೈಫಲ್ಯದಿಂದ ಬಳಲುತ್ತಿದ್ದ ಹಾಸನದ ಲಿಖಿತಾ ಎಂಬ ಏಳು ವರ್ಷದ ಬಾಲಕಿ ಸೇರಿದಂತೆ ಆರು ಮಕ್ಕಳಿಗೆ ಜೀವದಾನ ಮಾಡಲಾಗಿದೆ. ಎಲ್ಲರೂ ೩ರಿಂದ ೧೦ ವರ್ಷದೊಳಗಿನವರಾಗಿದ್ದು, ಕೊನೆಯ ಹಂತದ ಯಕೃತ್
ಕಾಯಿಲೆಯಿಂದ ಬಳಲುತ್ತಿದ್ದರು.
ಹಾಸನದ ಬಾಲಕಿಯ ತಂದೆ ೪೦ ವರ್ಷ ವಯಸ್ಸಿನ ಚನ್ನಾ ನಾಯಕ ಮಗಳ ಜೀವ ಉಳಿಸಲು
ತಮ್ಮ ಒಂದು ಯಕೃತ್ ದಾನ ಮಾಡಿದ್ದರು. ಐಎಲ್‌ಸಿ ತಂಡದ ಬೆಂಬಲ,
ಕಸಿಗೆ ಆಸ್ಪತ್ರೆ ನೀಡಿದ ಕಸಿ, ಉದ್ಯಮದಿಂದ ದೊರಕಿದ ಸಿಎಸ್‌ಆರ್ ನೆರವು ಮತ್ತು ಕ್ರೌಡ್‌ಫಂಡಿಂಗ್
ಮೂಲಕ ಈ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.