ಮಕ್ಕಳ ಕೈಗೆ ಪುಸ್ತಕ ಕೊಡಿ : ಸಾಹಿತಿ ಕಿರಣ್ ಮಿರಜ್ಕರ್

 ಹಿರಿಯೂರು : ಮಕ್ಕಳ ಕೈಗೆ ಪುಸ್ತಕಗಳನ್ನು ಕೊಡಬೇಕು ಎಂದು ಸಾಹಿತಿ ಕಿರಣ್ ಮಿರಜ್ಕರ್ ಅಭಿಮತ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಹೇರಿಕೆ ಮಾಡಿದ್ದು ಅಲ್ಲದೇ ಶಾಲಾಕಾಲೇಜುಗಳು ಬಂದ್ ಆಗಿವೆ ಸಮಾಜದಲ್ಲಿ ಶಿಕ್ಷಣ ಮಟ್ಟ ತಾನಾಗಿಯೇ ಕುಸಿಯುತ್ತಿದೆ ಈಗ ಮಕ್ಕಳು ಮನೆಗಳಲ್ಲೇ ಕಾಲ ಕಳೆಯುವಂತಾಗಿದೆ, ಆನ್ ಲೈನ್ ಕ್ಲಾಸಸ್ ಗಳೂ ಸಹಾ ಮಕ್ಕಳಿಗೆ ಹೇರುವಂತಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಪುಟಾಣಿ ಮಕ್ಕಳಿಗೂ ಅ ಆ ಇ ಈ ಅಕ್ಷರಮಾಲೆ, ಮಗ್ಗಿ, ಪದ್ಯಗಳನ್ನು ಮನೆಯಲ್ಲಿಯೇ ಕಲಿಸಬೇಕು, ಈಗ ಓದುತ್ತಿರುವ ತರಗತಿಗಿಂತ ಮುಂದಿನ ತರಗತಿಗಳ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು ಕೇವಲ ಮೊಬೈಲ್ ನೋಡಿಯೋ ಆಟವಾಡಿಯೋ ನಿದ್ದೆ ಮಾಡಿಯೋ ಕಾಲ ಕಳೆಯುವುದಕ್ಕಿಂತ ದೇಶದ ಸಂಸ್ಕೃತಿ ಬಿಂಬಿಸುವ ಸಾಹಿತ್ಯ ಸಂಗೀತ ಭಾವಗೀತೆÀ ಭಕ್ತಿಗೀತೆ ಜನಪದಗೀತೆ ವಚನಸಂಗೀತ ಹಾಡುವುದು ಚಿತ್ರ ಬಿಡಿಸುವುದು ರಂಗೋಲೆ ಬಿಡಿಸುವುದು ಇಂತಹ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಬೇಕು, ಕಾಲೇಜು ಮಟ್ಟದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಸಾಹಿತಿ ಕಿರಣ್ ಮಿರಜ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೆ ಸಾಕಷ್ಟು ಕಾಲ ಹರಣವಾಗಿದೆ ಸಮಯ ತುಂಬಾ ಅಮೂಲ್ಯ ಇನ್ನು ಮುಂದೆಯಾದರೂ ಮಕ್ಕಳಿಗೆ ಪುಸ್ತಕಗಳನ್ನು ದಿನಪತ್ರಿಕೆಗಳನ್ನು ಓದುವುದು ರಾಮಾಯಣ ಮಹಾಭಾರತ ತಿಳಿದುಕೊಳ್ಳುವುದು ಸ್ವಾಮಿವಿವೇಕಾನಂದರು ಶಾರದಾ ಮಾತೆ ರಾಮಕೃಷ್ಣ ಪರಮಹಂಸರ ಪುಸ್ತಕಗಳನ್ನು ಓದುವುದು, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ್, ಬಸವಣ್ಣ ಮುಂತಾದ ದಾರ್ಶನಿಕರು ಸಾಹಿತಿಗಳು ಸ್ವಾತಂತ್ರ ಹೋರಾಟಗಾರರು ಇತಿಹಾಸ ತಜ್ಞರು ಹಿರಿಯ ರಾಜಕಾರಣಿಗಳು ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ತಿಳಿದುಕೊಳ್ಳುವ ಹವ್ಯಾಸ ಮಕ್ಕಳಲ್ಲಿ ಮೂಡಿಸಬೇಕು ಎಂದು ಸಾಹಿತಿ ಕಿರಣ್ ಮಿರಜ್ಕರ್ ಪೋಷಕರಲ್ಲಿ ಮನವಿ ಮಾಡಿದ್ದಾರೆ.