ಮಕ್ಕಳ ಕಾಯಿಲೆಗಳ ಕುರಿತು ಜಾಗ್ರತೆ ಇರಲಿ

ಮಾನ್ವಿ,ಏ.೧೮- ತಾಲೂಕಿನ ಜೀನ್ನೂರು ಕ್ಯಾಂಪ್‌ನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯವತಿಯಿಂದ ನಡೆದ ಮಕ್ಕಳಿಗೆ ಲಸಿಕೆ ಹಾಕಿಸುವ ಕುರಿತು ತಾಯಿಂದಿರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ ಮಕ್ಕಳಿಗೆ ಅಗತ್ಯವಾದ ಲಸಿಕೆಗಳನ್ನು ಹಾಕಿಸುವುದರಿಂದ ಅವರಿಗೆ ಬರುವ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ ದಯವಿಟ್ಟು ಪಾಲಕರಿಗೆ ಮಕ್ಕಳ ಕಾಯಿಲೆಗಳ ಕುರಿತು ಜಾಗೃತಿ ಇರಲಿ ಎಂದು ಹೇಳಿದರು.
ಬೇಸಿಗೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳ ಬಗ್ಗೆ ಹಾಗೂ ಅವುಗಳು ಬಾರದಂತೆ ಲಸಿಕೆ ಹಾಕುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಬಹುದು ದಡಾರ ಕಾಯಿಲೆ ಸೊಂಕಿ ನಿಂದ ಮಕ್ಕಳಲ್ಲಿ ತೀವ್ರವಾದ ಶ್ವಾಸಕೋಶದ ಸೋಂಕು, ಕೆಮ್ಮು, ಜ್ವರ ಮತ್ತು ನೀರಿನಿಂದ ಕೂಡಿದ ಕಣ್ಣು ಸಿಂಬಳು ಸುರಿಯುವುದು ಬಾಯಿಯಲ್ಲಿ ಕೆಂಪಾದ ತಿಳಿ ನೀಲಿ ಬಣ್ಣದ ಗುಳ್ಳೆಗಳು ಮೂರರಿಂದ ಮತ್ತು ಐದು ದಿನಗಳ ನಂತರ ಮುಖ ಮತ್ತು ಕುತ್ತಿಗೆ ಮೇಲೆ ಹೊಟ್ಟೆ ಮತ್ತು ದೇಹದ ಭಾಗಕ್ಕೆ ಗುಳ್ಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತವೆ.
ದಡಾರ ಹಾಗೂ ರುಬೆಲ್ಲಾ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಒಬ್ಬರಿಂದ ಒಬ್ಬರಿಗೆ ಹಾರಡುತ್ತದೆ. ದಡಾರ ಮತ್ತು ರುಬೆಲ್ಲಾ ಲಕ್ಷಣಗಳು ಕಾಣಿಸಿಕೊಂಡಾಗ ಮೂಡನಂಬಿಕೆಗಳಿಗೆ ಬಲಿಯಾಗದೆ ಸರಕಾರಿ ಆಸ್ಪತ್ರೆಯಲ್ಲಿನ ಮಕ್ಕಳ ತಜ್ಞರಲ್ಲಿ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ತಿಳಿಸಿದರು. ಅಂಗನವಾಡಿಯ ಮಕ್ಕಳಲ್ಲಿ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳ ಲಕ್ಷಣಗಳ ಬಗ್ಗೆ ತಪಾಸಣೆ ನಡೆಸಲಾಯಿತು.
ಅಂಗನವಾಡಿ ವ್ಯಾಪ್ತಿಯ ತಾಯಿಂದಿರು ಮತ್ತು, ಮಕ್ಕಳು ಅಂಗನವಾಡಿ ಕಾರ್ಯಕರ್ತೆ ರೇಣುಕಾ ಸೇರಿದಂತೆ ಇತರರು ಹಾಜರಿದ್ದರು.