ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆಗೈದ ಹಲಕುರ್ಕಿಗೆ ರಾಜ್ಯ ಪ್ರಶಸ್ತಿ

ಹುಬ್ಬಳ್ಳಿ,ನ17: ಹುಬ್ಬಳ್ಳಿ ಹಾಕಿ ಅಕಾಡೆಮಿ ಸಂಸ್ಥೆಯ ಕಾರ್ಯದರ್ಶಿಯಾದ ಭೀಮಣ್ಣಾ ಮಾರುತಿ ಹಲಕುರ್ಕಿ ಇವರಿಗೆ 2022-23 ನೇ ಸಾಲಿನ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯಪಾಲರಾದ ತಾವರ್ ಚಂದ ಗೇಹ್ಲೋಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ಯ ಅವರ ನೇತೃತ್ವದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಲಕುರ್ಕಿ ಸುಮಾರು 20 ವರ್ಷಗಳಿಂದ ಕೊಳಚೆ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಹಾಗೂ ಹಾಕಿ ಕ್ರೀಡೆ ತರಬೇತಿ ನೀಡಿದ್ದು ಮತ್ತು ಬಾಲಾಪರಾಧಿ ಸುಧಾರಣೆ, ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಹಾಗೂ ಬಾಲ್ಯ ವಿವಾಹದ ಬಗ್ಗೆ ಅರಿವು ಮತ್ತು ಬಿಕ್ಷಾಟಣೆ ಬಗ್ಗೆ ಜಾಗೃತಿ ಮೂಡಿಸಿ ಅವರ ಪುನರ್ವಸತಿ ಮಾಡಿದ್ದಾರೆ.
ಪ್ರಸ್ತುತ 120 ಕ್ಕೂ ಹೆಚ್ಚು ಮಕ್ಕಳಿಗೆ ಹಾಕಿ ಆಟದ ತರಬೇತಿ ನೀಡಿದ್ದು, ಅವರು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ.