ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು : ವಿಜಯಲಕ್ಷ್ಮಿ ಪಾಟೀಲ

ಔರಾದ್ :ಆ.11: ಬೆಳೆಯುವ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ವೃದ್ಧಿಗೆ ಶಿಕ್ಷಕರಿಗೆ ಇರುವಷ್ಟು ಜವಾಬ್ದಾರಿ ಪಾಲಕರ ಜವಾಬ್ದಾರಿ ಕೂಡ ಇದೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ್ ಹೇಳಿದರು.

ತಾಲೂಕಿನ ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ 2023-24ನೇ ಸಾಲಿನ ಪ್ರಥಮ ಪಾಲಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳ
ಕಲಿಕೆಯಲ್ಲಿ ಮಕ್ಕಳು, ಶಿಕ್ಷಕರು ಜೊತೆಜೊತೆಯಾಗಿ ಹೋಗಬೇಕು. ಇದರಲ್ಲಿ ಪಾಲಕರ ಪಾತ್ರವೂ ಮುಖ್ಯವಾಗಿದೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೆ ಪಾಲಕರ ಜವಾಬ್ದಾರಿಯಲ್ಲ. ಅದರ ಹೊರತಾಗಿಯೂ ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತವರಣದ ಜೊತೆಗೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದರು.

ಚಿಂತಾಕಿ ಪಿಎ??? ರೇಣುಕಾ ಭಾಲೇಕರ್ ಮಾತನಾಡಿ, ಮಕ್ಕಳು ಜ್ಞಾನ ವೃದ್ಧಿಗೆ ಅಗತ್ಯ ಕ್ರಮಗಳನ್ನು ಶಿಕ್ಷಕರು ಕಲಿಸಿಕೊಡಬೇಕು. ಶಿಕ್ಷಕ, ಪಾಲಕರ ಸರಿಯಾದ ಮಾರ್ಗದರ್ಶನ ಮಕ್ಕಳಿಗೆ ಲಭ್ಯವಾದಲ್ಲಿ ಅವರಲ್ಲಿನ ಸಾಮಥ್ರ್ಯ ದ್ವಿಗುಣಗೊಳ್ಳುತ್ತದೆ ಎಂದರು.

ಎಕಲಾರ ಪಿಕೆಪಿಎಸ್ ಲೆಕ್ಕಪರಿಶೋಧಕ ಪ್ರಕಾಶ ಹಿಪ್ಪಳಗಾವೆ ಮಾತನಾಡಿ, ಶಿಕ್ಷಕರಿಗೆ ಇಂತಹ ಕಾರ್ಯಕ್ರಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶವಿದ್ದಂತೆ. ಇಲ್ಲಿ ಮಕ್ಕಳ ಸಾಮಥ್ರ್ಯದ ಜೊತೆಗೆ ಶಿಕ್ಷಕರ ಸಾಮಥ್ರ್ಯವೂ ಅನಾವರಣಗೊಳ್ಳುತ್ತದೆ ಎಂದರು.

ಕಿರಣ ಹಿಪ್ಪಳಗಾವೆ, ಗಜಾನನ ಮಳ್ಳಾ, ಎಕಂಬಾ ಸಿಆರ್‍ಪಿ ಪ್ರಕಾಶ ಬರ್ದಾಪೂರೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪೂರೆ, ಉಪಾಧ್ಯಕ್ಷ ರಮೇಶ ಕಾಂಬಳೆ ಹಾಗೂ ವರ್ಗಾವಾಗಿರುವ ಶಿಕ್ಷಕಿ ನಿರ್ಮಲಾ ಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪೂರೆ, ಉಪಾಧ್ಯಕ್ಷ ರಾಜಕುಮಾರ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಬಿ ಪಾಂಚಾಳ, ಸಿಆರ್‍ಪಿ ಮಹಾದೇವ ಘುಳೆ, ಪ್ರವೀಣ, ಗ್ರಾಪಂ ಸದಸ್ಯ ಬಕ್ಕಪ್ಪ, ಗಂಗಶೆಟ್ಟಿ ಬಿರಾದಾರ, ಶಾಂತಮ್ಮ, ಶಿವಕುಮಾರ ಮಣಿಗೆಂಪೂರೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ಸಿದ್ಧೇಶ್ವರಿ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು, ಪಾಲಕ ಪೆÇೀಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.