ಮಕ್ಕಳ ಕಲಿಕೆಗೆ ಪ್ರೋತ್ಸಾಹ ಅಗತ್ಯ: ಕೆ.ಎಮ್.ಆನಂದ

ಕಲಬುರಗಿ,ಅ.17-ಮಕ್ಕಳ ಜಾಗೃತಿ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ಬರುವ ಸರಕಾರಿ ವೀಕ್ಷಣಾಲಯ ಕಲಬುರಗಿಯ ಸಹಯೋಗದೊಂದಿಗೆ ಮಕ್ಕಳಿಗಾಗಿ ದಸರಾ ಶಿಬಿರವನ್ನು ವೀಕ್ಷಣಾಲಯದ ಮಕ್ಕಳ ಕಲಿಕಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಕಲಬುರಗಿ ಹೆಚ್ಚುವರಿ ಬಾಲ ನ್ಯಾಯ ಮಂಡಳಿಯ ಅಧ್ಯಕ್ಷರಾದ ಕೆ.ಎಮ್ ಆನಂದ ಅವರು ಶಿಬಿರವನ್ನು ಉದ್ಘಾಟಿಸಿ, ಮಕ್ಕಳಿಗಾಗಿ ಇಂತಹ ವಿಭಿನ್ನ ರೀತಿಯ ಶಿಬಿರಗಳು ಆಗಬೇಕಾಗಿರುವುದು ಅವಶ್ಯಕವಾಗಿದೆ. ಮಕ್ಕಳಲ್ಲಿ ಅಡಗಿರುವ ವಿವಿಧ ರೀತಿಯ ಕೌಶಲ್ಯಗಳನ್ನ ಹೊರ ತರಲು ಈ ಶಿಬಿರ ಸಹಾಯವಾಗಲಿದೆ. ಮಕ್ಕಳು ಆಸಕ್ತಿಯಿಂದ ಈ ಶಿಬಿರದಲ್ಲಿ ಪಾಲ್ಗೊಂಡು ಅನೇಕ ವಿಷಯಗಳನ್ನ ತಿಳಿದುಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರಕಾರಿ ವೀಕ್ಷಣಾಲಯದ ಅಧೀಕ್ಷಕರಾದ ಚಂದ್ರಕಾಂತ ಹಿರೇಮಠ ಅವರು ಮಾತನಾಡಿ, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಮಕ್ಕಳ ಜಾಗೃತಿ ಸಂಸ್ಥೆಯು ವಿಭಿನ್ನ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದೇ ರೀತಿಯಾಗಿ ದಸರಾದ ವಿಶೇಷತೆ ಬಗ್ಗೆ ತಿಳಿಸುವುದಕ್ಕೆ ಈ ಒಂದು ದಸರಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಜಾಗೃತಿ ಸಂಸ್ಥೆಯ ಶಿವಶರಣ ಪರಪ್ಪಗೋಳ ಮಾತನಾಡಿ, ಮಕ್ಕಳ ಮನಸ್ಸನ್ನ ನಾವು ಅರ್ಥ ಮಾಡಿಕೊಂಡು ಸರಳವಾದ ರೀತಿಯಲ್ಲಿ ವಿಷಯವನ್ನು ತಿಳಿಸಿದಾಗ ಮಾತ್ರ ಅವರು ಬಹು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಚಟುವಟಿಕೆ ಕೇಂದ್ರಿತವಾಗಿ ನಾವು ಮಕ್ಕಳಿಗೆ ಕಲಿಸುತ್ತಿದ್ದೇವೆ. ಮಕ್ಕಳು ನಮ್ಮ ಈ ಚಟುವಟಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ದಸರಾ ಶಿಬಿರದ ಅಂಗವಾಗಿ ಮಕ್ಕಳಿಗೆ ದಸರಾ ಹಬ್ಬದ ಮಹತ್ವನ್ನ ಮೈಸೂರು ಅರಮನೆಯ ಇತಿಹಾಸ ಹೀಗೆ ಹಲವು ವಿಷಯಗಳನ್ನ ಚಟುವಟಿಕೆ ಆಧಾರಿತವಾಗಿ, ಮಕ್ಕಳ ಕೈಯಿಂದಲೇ ಮಾಡಿಸುವ ಮೂಲಕ, ಹಾಗೂ ವಿಡಿಯೋ ತೋರಿಸಿ ತಿಳಿಸುವ ಮೂಲಕ ಮಕ್ಳಳ ಕಲಿಕೆಗೆ ಪೆÇ್ರೀತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಬಾಲನ್ಯಾಯ ಮಂಡಳಿಯ ಸದಸ್ಯರಾದ ಶಿವಾನಂದ ಅಣಜಗಿ, ಶೋಭಾದೇವಿ ಉಪ್ಪಿನ, ಗೃಹಮಾತೆ ಅಂಬವ್ವಾ, ರಮೇಶ, ರಾಕೇಶ, ನಾಗವೇಣಿ, ಬಸವರಾಜ ತಳವಾರ, ಕೆ.ಶಿವಮೂರ್ತಿ, ಸಂಜುಕುಮಾರ ಇದ್ದರು.