
ಸಂಜೆವಾಣಿ ವಾರ್ತೆ
ಸಿರುಗುಪ್ಪ :ಮಾ,1- ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ನಿತ್ಯ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರಿಂದ ಮಕ್ಕಳ ಕಲಿಕೆಗೆ ಗಣಕಯಂತ್ರ ಪೂರಕವಾಗಿರಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಬಾಗೇವಾಡಿ ಪಂಪಯ್ಯ ಹೇಳಿದರು.
ತಾಲ್ಲೂಕಿನ ಬಾಗೇವಾಡಿ ಗ್ರಾಮದ ಬಸವಣ್ಣನ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೂತನ ಕಂಪ್ಯೂಟರ್ ಕಲಿಕಾ ತರಗತಿಯ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಮನೋಧರ್ಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಬಡತನ ಬದಿಗಿಟ್ಟು ದಾನಿಗಳು ಕೊಡಮಾಡುವ ಆಧುನಿಕ ಸಲಕರಣಿಗಳು ಹಾಗೂ ಸರಕಾರ, ಸಂಘ ಸಂಸ್ಥೆಗಳು ನೀಡುವ ಸಹಾಯ ಪಡೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು, ಗ್ರಾಮೀಣ ಭಾಗದಲ್ಲಿ ಹುಟ್ಟಿ ನಮ್ಮ ನಡುವೆ ಸಾಧನೆಗೈದವರಂತೆ ನೀವೂ ಸಾಧಿಸಬೇಕೆಂದು ತಿಳಿಸಿದರು.
ಗ್ರಾ.ಪಂ.ಸದಸ್ಯ ಸಣ್ಣ ರಾಮಯ್ಯ, ಮುಖ್ಯ ಗುರು ಮಹೇಶ್, ಶಿಕ್ಷಕ ಕೋರಿಜಗದೀಶ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಣ್ಣ, ಮುಖಂಡರಾದ ರಾಘವೇಂದ್ರ,ಬಸವರಾಜ,ಶಂಕ್ರಪ್ಪ,ಹನುಮಂತ,ಪಂಪಣ್ಣ, ಬಸವ ಇದ್ದರು.