ಮಕ್ಕಳ ಕಲಾ ಪ್ರತಿಭೆ ಪ್ರೋತ್ಸಾಹಿಸಿ:ಅಂದಾನಿ

ಕಲಬುರಗಿ:ಜ.1: ‘ಶಾಲೆ ಹಂತದಲ್ಲಿನ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ, ಅವರ ಚಿತ್ರಕಲಾಕೃತಿಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ’ ಎಂದು ಹಿರಿಯ ಚಿತ್ರಕಲಾವಿದ ವಿ.ಜಿ. ಅಂದಾನಿ ಹೇಳಿದರು.

ನಗರದ ನೀಲಗಂಗಮ್ಮ ಗುರಪ್ಪ ಅಂದಾನಿ ಶನಿವಾರ ಗ್ಯಾಲರಿಯಲ್ಲಿ ಪೇಠಶಿರೂರ ಪ್ರೌಢಶಾಲೆ, ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್ ಹಾಗೂ ಕಲಿ-ಕಲಿಸು ಯೋಜನೆಯಡಿ ಆಯೋಜಿಸಿದ್ದ ‘ಪಠ್ಯಗಳಿಗೆ ಸುರಪುರ ಶೈಲಿಯ ಚಿತ್ರಸಂಪುಟ’ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನದ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ

‘ಪೇಠಶಿರೂರನಂತಹ ಸರಕಾರಿ ಶಾಲೆಯ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದ ಕಲಾ ಶಿಕ್ಷಕರ ಶ್ರಮ ಮೆಚ್ಚುವಂತಹದ್ದು. ವಿದ್ಯಾರ್ಥಿಗಳು ಸಹ ಪಠ್ಯದಲ್ಲಿ ತಾವು ಓದಿದ್ದು, ನೋಡಿದನ್ನು ಸುರಪುರ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಅವರ ಕಲೆಗೆ ಇನ್ನಷ್ಟು ಪೆÇ್ರೀತ್ಸಾಹ ಸಿಗಬೇಕಿದೆ’ ಎಂದರು.

ಕಲಬುರಗಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ವಿ.ಜಿ.

ಅಂದಾನಿ ಅವರು ‘ಸುರಪುರ ಶೈಲಿಯ ಚಿತ್ರಸಂಪುಟ’ವನ್ನು ಬಿಡುಗಡೆ ಮಾಡಿದರು. ಚಿತ್ರಕಲಾವಿದರು ಪಾಲ್ಗೊಂಡಿದ್ದರು

‘ಸಮಾಜದಲ್ಲಿ ಕಲಾವಿದರು ಈ ಪ್ರಯೋಗ ಮಾಡಲಾಗಿದೆ. ಅವರು ಸಾಮೂಹಿಕವಾಗಿ ಸಿಗುವುದಿಲ್ಲ. ಮುಂದೆಯೂ ಇಂತಹ ಪ್ರಯೋಗಗಳು ಕೆಲವೇ ಕೆಲವರು ಮಾತ್ರ ಕಲಾವಿದರಾಗಿ ಹೊರಹೊಮ್ಮುತ್ತಾರೆ. ಕಲೆಯು ಸಾಕಷ್ಟು ಖರ್ಚನ್ನು ಬೇಡುವಂತಹದ್ದು’ ಎಂದು ಹೇಳಿದರು.

ಯೋಜನಾ ಅನುಷ್ಠಾನ ಶಿಕ್ಷಕ ಸೂರ್ಯಕಾಂತ ನಂದೂರ ಮಾತನಾಡಿ, ‘ನಮ್ಮ ಭಾಗದಲ್ಲಿನ ಸುರಪುರ ಮಾದರಿಯ ಚಿತ್ರಕಲೆಯು ಮಕ್ಕಳಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ನಿರಂತರವಾಗಿ ನಡೆಯಲಿವೆ’ ಎಂದರು. ಕಾರ್ಯಕ್ರಮದಲ್ಲಿ ಪೇಠಶಿರೂರ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಾಲ್ ಅಹಮದ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಕೊಪ್ಪದ, ಎಸ್‍ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ಕಮಕನೂರ, ಹಿರಿಯ ಕಲಾವಿದರಾದ ಮೋಹನ್ ಸೀತನೂರ್,ವಿ.ಬಿ. ಬಿರಾದಾರ್, ಡಾ ಸುಬ್ಬಯ್ಯ ನೀಲಾ, ಟಿ ದೇವೇಂದ್ರಪ್ಪ, ಡಾ.ಆಕಾಶ್, ಡಾ ರೆಹಮಾನ್ ಪಟೇಲ್ , ನಾರಾಯಣ ಎಂ ಜೋಶಿ, ಅಯಾಜುದ್ದೀನ್ ಪಟೇಲ್, ಗಿರೀಶ್ ಕುಲಕರ್ಣಿ, ಡಿ ಎಸ್. ದೇಸಾಯಿ, ರಾಮ್ ಗಿರಿ ಪೆÇಲೀಸ್ ಪಾಟೀಲ್, ಯುವಕ ಕಲಾವಿದರಾದ ರಾಜಕುಮಾರ್, ಅಭಿಜಿತ್, ಮುಂತಾದ ಹಲವಾರು ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು. ಪುಸ್ತಕ ಸಾಲಿನ ಶ್ರೇಷ್ಠ ವರ್ಣ ಶಿಲ್ಪಿ ಪ್ರಶಸ್ತಿ ಪುರಸ್ಕøತರಾದ ಬಸವರಾಜ್ ಎಲ್ , ಜಾನೆ ಅವರಿಗೆ ಅಭಿನಂದಿಸಲಾಯಿತು. ಪ್ರಸ್ತುತ ಸಾಲಿನ ತಮ್ಮ ಯೋಜನೆಗೆ ಐಎ???, ಇಂದ ಅನುದಾನ ಪಡೆದ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ್ ಕೊರಳ್ಳಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಚಿತ್ರ ಸಂಪುಟ ವಿತರಿಸಲಾಯಿತು. ಶಿವಲಿಂಗಪ್ಪ ಮೋಟಗಿ ನಿರೂಪಿಸಿದರು. ಸಹ ಶಿಕ್ಷಕ ರಾಜಶೇಖರ್ ಮಠಪತಿ ವಂದಿಸಿದರು. ಚಿತ್ರಕಲಾ ಪ್ರದರ್ಶನ ಡಿಸೆಂಬರ್
30 ರಿಂದ ಜನೆವರಿ 1 ರವರೆಗೆ ಮುಂಜಾನೆ 10 ರಿಂದ ಸಂಜೆ 4 ರವರೆಗೆ ಕಲಾಆಸಕ್ತರು, ಸಾರ್ವಜನಿಕರು ವಿಕ್ಷೀಸಬಹುದು.