ಮಕ್ಕಳ ಕನಸು ಸಾಕಾರಗೊಳ್ಳಲು ಪ್ರಯತ್ನ ಮಾಡಬೇಕು:ಕುಸುಮಾವತಿ

ಯಾದಗಿರಿ:ನ.15:ಮಕ್ಕಳು ಉತ್ತಮ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವುಗಳನ್ನು ಸಕಾರಗೊಳಿಸಲು ಪಾಲಕರು ಪ್ರಯತ್ನ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕøತಿಕ ಸಂಘ ತಾಲೂಕ ಸಂಚಾಲಕಿ ಕುಸುಮಾವತಿ ದಂಡಿಗಿಮಠ ಹೇಳಿದರು.
ನಗರದ ಪಟೇಲವಾಡಿ ಪ್ರಗತಿ ಕೇಂದ್ರದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದರು. ಮಾಜಿ ಪ್ರಧಾನಿ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಣೆ ಮಾಡಲಾಗತ್ತದೆ. ಮಕ್ಕಳು ಯಾವುದೆ ದುಷ್ಟ ಕಾರ್ಯಗಳಿಗೆ ಗಮನಹರಿಸದೆ ಸದಾ ಕ್ರೀಯಶೀಲರಾಗಿ ಹೊಸ ಹೊಸದನ್ನು ಕಲಿಯುತ್ತಾ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಳಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು. ತಾಲೂಕ ಸಂಚಾಲಕ ತಿಮ್ಮಣ್ಣ ನಾಯಕ, ಪ್ರಗತಿ ಕೇಂದ್ರದ ನಿರ್ವಾಹಕಿ ಲಕ್ಷ್ಮೀ ಕೆಂಬಾವಿ ಸೇರಿದಂತೆ ಇತರರಿದ್ದರು.