
ಮುಂಬೈ, ಮಾ. ೫- ಪಠಾಣ್ ಚಿತ್ರದ ಯಶಸ್ಸಿನಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ತೇಲಾಡುತ್ತಿದ್ದಾರೆ. ಚಿತ್ರದ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆಹೊಡೆದು ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗಿದೆ.
ಮಧ್ಯೆ ಅವರ ಮಕ್ಕಳು ಓದಿನ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಕೂಡ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಶಾರುಖ್ ಕೂಡ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಶಾರುಖ್ ಖಾನ್ ಪತ್ನಿ ಗೌರಿ ಕೂಡ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಇದರೊಂದಿಗೆ ಶಾರುಖ್ ಖಾನ್ ಅವರ ಇಬ್ಬರು ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಕೂಡ ವಿದೇಶದಲ್ಲಿ ತಮ್ಮ ಅಧ್ಯಯನವನ್ನು ಮಾಡಿದ್ದಾರೆ.
ಶಾರುಖ್ ಖಾನ್ ತಮ್ಮ ಶಾಲಾ ಶಿಕ್ಷಣವನ್ನು ಸ್ಕಾಟಿಷ್ ಸ್ಕೂಲ್ ಸೇಂಟ್ ಕೊಲಂಬಾದಿಂದ ಪೂರ್ಣಗೊಳಿಸಿದ್ದಾರೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಶಾರುಖ್ ಖಾನ್ ದೆಹಲಿಯ ಹಂಸರಾಜ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇದಾದ ಬಳಿಕ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಶಾರುಖ್ ಖಾನ್ ಜೆಎನ್ಯುನಿಂದ ಮಾಸ್ ಕಮ್ಯೂನಿಕೇಷನ್ ಪದವಿ ಪಡೆದಿದ್ದಾರೆ.
ಶಾರುಖ್ ಖಾನ್ ಮಗ ಆರ್ಯನ್ ಖಾನ್ ಕೂಡ ದೊಡ್ಡ ಕನಸು ಹೊಂದಿದ್ದಾರೆ. ಆರ್ಯನ್ ಖಾನ್ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸಿದ್ರು. ಇದಾದ ಬಳಿಕ ಆರ್ಯನ್ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.ಆರ್ಯನ್ ಖಾನ್ ಈಗ ಕ್ಯಾಲಿಫೋರ್ನಿಯಾ ಸ್ಕೂಲ್ ಆಫ್ ಸಿನೆಮ್ಯಾಟಿಕ್ ಆರ್ಟ್ಸ್ ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ತನ್ನ ತಂದೆಯ ನಿರ್ಮಾಣದ ರೆಡ್ ಚಿಲ್ಲಿಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಆರ್ಯನ್ ವಿದ್ಯಾಭ್ಯಾಸ ಕ್ಕಾಗಿ ಲಕ್ಷ ಲಕ್ಷ ರೂಪಾಯಿ ಶುಲ್ಕ ಪಾವತಿಸಿದ್ದಾರೆ
ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಶೀಘ್ರದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸುಹಾನಾ ಖಾನ್ ಅಭಿನಯದ ಆರ್ಚೀಸ್ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸುಹಾನಾ ಖಾನ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನ ಧೀರೂಭಾಯಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಮಾಡಿದ್ದಾರೆ. ಇದಾದ ಬಳಿಕ ಸುಹಾನಾ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದರು. ಸುಹಾನಾ ಲಂಡನ್‌ಗೆ ಆರ್ಡಿಗ್ಲಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಈ ಕಾಲೇಜಿನ ಶುಲ್ಕವೂ ಲಕ್ಷ ಲಕ್ಷ ಇದೆ. ಶಾರುಖ್ ಖಾನ್ ಅವರ ೨ನೇ ಮಗ ಅಬ್ರಾಮ್ ಖಾನ್ ಇನ್ನೂ ಚಿಕ್ಕವನು. ಅಬ್ರಾಮ್ ಪ್ರಸ್ತುತ ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿದ್ದಾರೆ.