ಮಕ್ಕಳ ಏಳಿಗೆಯಲ್ಲಿ ಪಾಲಕ-ಶಿಕ್ಷಕರ ಪಾತ್ರ ಬಹು ದೊಡ್ಡದು : ಮೊಕ್ತೆದಾರ್

ಔರಾದ್ :ಏ.3: ಮಕ್ಕಳ ಸವಾರ್ಂಗೀಣ ಏಳಿಗೆಗೆ ಪಾಲಕ-ಶಿಕ್ಷಕರ ಜಂಟಿ ಶ್ರಮ ಅಗತ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಹೇಳಿದರು.

ಪಟ್ಟಣದ ಗ್ಲೋಬಲ್ ಟೈಮ್ಸ್ ಪ್ರಾಥಮಿಕ ಶಾಲೆಯಲ್ಲಿ ಈಚೇಗೆ ನಡೆದ ‘ಗ್ರ್ಯಾಜುಯೇಷನ್ ಡೇ’ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಿಗೆ ಬಾಲ್ಯದಿಂದ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗು ಸಮಾಜದ ಜನರ ಪ್ರಭಾವ ಬೀರುತ್ತದೆ. ಆದ್ದರಿಂದ ಸುತ್ತಲಿನ ವಾತಾವರಣ ಸರಿಯಾಗಿರಬೇಕು ಎಂದರು.
ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಭಾಲ್ಕಿ ನಿರ್ಮಲಾ ಪಿಯು ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ಕಾರಜೋಳಗೆ ಮಾತನಾಡಿ, ಮಕ್ಕಳಿಗೆ ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು. ಸಂಸ್ಕಾರವು ಮುಖ್ಯವಿದೆ. ಮಕ್ಕಳು ಪಾಲಕರ, ಶಿಕ್ಷಕರ ಚಲನವಲನ ವೀಕ್ಷಣೆ ಮಾಡುತ್ತಾರೆ. ಆದ್ದರಿಂದ ಪಾಲಕ-ಶಿಕ್ಷಕರು ಇದನ್ನು ಅರಿತು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳಸಿಕೊಳ್ಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷೆ ಸುಜಾತಾ ಘಾರಗೆ ಮಾತನಾಡಿ, ಗಡಿ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದೆ. ಪಾಲಕರು ಸಂಸ್ಥೆ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದರು. ಪಾಲಕರ ವಿಶ್ವಾಸದೊಂದಿಗೆ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ನಾವು ಸೇವೆ ಸಲ್ಲಿಸುತ್ತಿದ್ದೇವೆ. ಶಿಕ್ಷಕರು ಮಕ್ಕಳಿಗೆ ಪೆÇೀಷಕರಂತೆ ನೋಡಿಕೊಳ್ಳುವ ಜತೆಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಮುಖಂಡ ಚಂದ್ರಶೇಖರ ಪಾಟೀಲ್ ಮಾತನಾಡಿ, ಗಡಿ ಭಾಗದಲ್ಲಿ ಶಾಲೆ ತೆರೆದು ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಮೆಚ್ಚುವಂತದಾಗಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ, ಸಿಆರ್.ಪಿ ವೆಂಕಟ ಔತಾಡೆ, ತಾನಾಜಿ ಘಾರಗೆ, ಅಜರ್, ಪ್ರವೀಣ ಜಾಧವ ಸೇರಿದಂತೆ ಶಿಕ್ಷಕರು, ಪಾಲಕರು ಪಾಲ್ಗೊಂಡರು.