
ಚಿಂಚೋಳಿ,ಆ.30- ಮಕ್ಕಳ ನಾಳಿನ ಭವಿಷ್ಯ ಉಜ್ವಲವಾಗಲು ಬಾಲ್ಯದಿಂದಲೇ ವಚನ ಸಾಹಿತ್ಯ ಅಧ್ಯಯನ ಮಾಡಬೇಕು. ನವ ಪೀಳಿಗೆಯ ನಾಳಿನ ಸುಂದರ ಬದುಕಿಗೆ ಶರಣರ ಜೀವನ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತದೆ ಶಿಸ್ತು, ಸಂಯಮ, ಸಮಯ ಪಾಲನೆ, ನಿರಂತರ ಅಧ್ಯಯನದಿಂದ ಮಾತ್ರ ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ಕಲಬುರ್ಗಿಯ ಶರಣ ಸಾಹಿತಿ ಡಾ. ಶಿವಶರಣಪ್ಪ ಧಾಬಾ ಅಭಿಪ್ರಾಯ ಪಟ್ಟರು.
ಅವರು ಚಿಂಚೋಳಿ ತಾಲೂಕಿನ ಗಣಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಚಿಂಚೋಳಿ ತಾಲೂಕಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ ವಿಶ್ವ ವಚನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಲಬುರ್ಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಡಾ. ವಿಜಯಕುಮಾರ ಪರುತೆ, ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಬದುಕು ಸಂಸ್ಕಾರಯುತವಾಗಿ ಎತ್ತರಕ್ಕೆ ಏ ರುತ್ತದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಪಠ್ಯದಷ್ಟೇ, ಸಹಪಠ್ಯ ಚಟುವಟಿಕೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ; ಎಂದರು. ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಬಿ ಎಸ್ ಮಾಲಿ ಪಾಟೀಲ್, ಮುಖ್ಯ ಗುರು ಮಾರುತಿ ಪತಂಗೆ, ಚನ್ನವೀರ್ ಕಲ್ಲೂರ, ಮುಖ್ಯ ಅತಿಥಿಗಳಾಗಿದ್ದರು. ವಚನ ಸಾಹಿತ್ಯದ ಮಹತ್ವ ತಿಳಿಸುತ್ತಾ ತಮ್ಮ ವಿಶಿಷ್ಟ ನಗೆ ಬುಗ್ಗೆಗಳಿಂದ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಹರಸೂರ, ರಾಚಯ್ಯ ಸ್ವಾಮಿ ಖಾನಾಪುರ್, ವಿದ್ಯಾರ್ಥಿಗಳನ್ನು ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ ಸಾ ಪ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ವಹಿಸಿದ್ದರು. ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಐನೋಳಿ ಪ್ರಾಸ್ತಾವಿಕ ಮಾತನಾಡಿದರು. ಶರಣಯ್ಯ ಸ್ವಾಮಿ ಅಲ್ಲಾಪೂರ ಹಾಗೂ ಗುರುರಾಜ್ ಜೋಶಿ ಐನೂ ಲಿಯವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಆನಂದ ತಮದಡ್ಡಿ ಸ್ವಾಗತಿಸಿದರು. ಚಾಂದಸಾಬ ದೈಹಿಕ ಶಿಕ್ಷಕರು ವoದಿಸಿದರು. ವಿಜ್ಞಾನ ಶಿಕ್ಷಕರಾದ ಸುರೇಶ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರನ್ನು, ವಚನ ಕಂಠಪಾಠದಲ್ಲಿ ವಿಜೇತರಾದ ಮಕ್ಕಳಿಗೆ ಸ್ಮರಣಿಕೆ, ಸನ್ಮಾನ ಪತ್ರ, ಪುಸ್ತಕ ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು