ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಫಿಲ್ಟರ್ ನೀರಿನ ಉಪಕರಣ ದೇಣಿಗೆ

ರಾಯಚೂರು,ಸೆ.೬- ಭಾರತೀಯ ಜೀವ ವಿಮಾ ನಿಗಮದ ೬೬ನೇ ವಿಮಾ ಸಪ್ತಾಹದ ಅಂಗವಾಗಿ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸ್ಟೇಷನ್ ಬಜಾರ್ ರಾಯಚೂರು ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಫಿಲ್ಟರ್ ನೀರಿನ ಉಪಕರಣವನ್ನು ನೀಡಿದರು.
ಶಾಲಾ ಮುಖ್ಯ ಗುರುಗಳಾದ ರಾಘವೇಂದ್ರ ಮಾತನಾಡಿ, ಈ ಭಾಗದಲ್ಲಿ ನಮ್ಮ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರುವುದು ನಮ್ಮ ಮಕ್ಕಳ ಭಾಗ್ಯ ಎಂದರು.
ಎಲ್.ಐ.ಸಿಯ ಎಲ್ಲಾ ಅಧಿಕಾರಿಗಳಿಗೆ ತಮ್ಮ ಶಾಲೆಯ ಪರವಾಗಿ, ಎಸ್ ಡಿಎಂಸಿ ಪರವಾಗಿ ,ಶಾಲಾ ಶಿಕ್ಷಕರ ಪರವಾಗಿ, ಶಾಲಾ ಮಕ್ಕಳ ಪರವಾಗಿ ಹೃದಯಪೂರ್ವಕ ವಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸದ್ರಿ ನಿಗಮದ ಮುಖ್ಯಸ್ಥ ಎಂ ವಿದ್ಯಾಧರ,ಎಲ್.ಐ.ಸಿ ವ್ಯವಸ್ಥಾಪಕ ಗುರುರಾಜ, ಮ್ಯಾನೇಜರ್ ಶಿವಕುಮಾರ, ಎಂ ರವಿ ಸೇರಿದಂತೆ ಎಲ್.ಐ.ಸಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.