ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಲಸಿಕೆ ಪಾತ್ರ ಹಿರಿದು

ಭಾಲ್ಕಿ:ಸೆ.6:ಮಕ್ಕಳ ಆರೋಗ್ಯ ರಕ್ಷಣೆ, ಬೆಳವಣಿಗೆಯಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗ್ರೇಡ್ -2 ತಹಶೀಲ್ದಾರ್ ಗೋಪಾಲ ಕುಲಕರ್ಣಿ ಹೇಳಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಐಎಂಐ 5.0 ತಾಲ್ಲೂಕು ಮಟ್ಟದ ಟಾಸ್ಕ್ ಫೆÇೀರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ಭವಿಷ್ಯ. ಅವರ ಉತ್ತಮ ಆರೋಗ್ಯಕ್ಕಾಗಿ ಎಲ್ಲ
ಇಲಾಖೆಗಳು ಸೇರಿ ಇಂದ್ರಧನುಷ್ 5.0 ಅಭಿಯಾನವನ್ನು ಯಶಸ್ವಿಗೊಳಿಸಬೇಕು.

ಎಲ್ಲ ಮಕ್ಕಳು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ನೋಡಿಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ ಮುಡಬಿ ಅವರು ಐಎಂಐ 5.0 ಕ್ರೀಯಾ ಯೋಜನೆ ಕುರಿತು, ವ್ಯಾಕ್ಸಿನ್ ಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ತಾಲ್ಲೂಕು ನೋಡಲ್ ಮೇಲ್ವಿಚಾರಕ ಶಿವಶಂಕರ ಮಾತನಾಡಿ, ಎಲ್ಲ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಪ್ರಮುಖರಾದ
ಸಹದೇವ, ಸತೀಶ, ವಿಶಾಲ, ರೋಜಮೇರಿ ಸೇರಿದಂತೆ ಇತರರು ಇದ್ದರು.