
ಭಾಲ್ಕಿ:ಫೆ.24:ಪಾಲಕರು ಮಕ್ಕಳೊಂದಿಗೆ ಮಮತೆಯಿಂದ ಮಾತನಾಡಿಸುವುದರಿಂದ ಮಕ್ಕಳಲ್ಲಿ ಪ್ರೀತಿ,ವಿಶ್ವಾಸ ಮೂಡಿ ಆತ್ಮೀಯತೆಯ ಭಾವನೆ ಬೆಳೆಯುತ್ತದೆ ಎಂದು ಬ.ಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಮ್ಮಿಕೊಂಡ 285 ನೆಯ ಮಾಸಿಕ ಶರಣ ಸಂಗಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಭಾರತ ಕಂಡ ಧೀಮಂತ ರಾಜರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರೂ ಒಬ್ಬರು. ಶಿವಾಜಿ ಮಹಾರಾಜರ ತಾಯಿ ಧಾರ್ಮಿಕ ಮಹಿಳೆಯಾಗಿದ್ದರು. ಅವರು ಮಗನಲ್ಲಿ ಧರ್ಮ, ಸಂಸ್ಕøತಿ, ರಾಜಕೀಯ, ಯುದ್ಧದ ಕಲೆ, ಸರಿ-ತಪ್ಪುಗಳ ಕಟ್ಟುನಿಟ್ಟಾದ ಪ್ರಜ್ಞೆಯನ್ನು ತುಂಬಿದರು. ಶಿವಾಜಿ ಮಹಾರಾಜರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೇ, ಎಲ್ಲ ಧರ್ಮೀಯರನ್ನು ಸಮಾನವಾಗಿ ಕಾಣುವ ಭಾವನೆ ಹೊಂದಿದ್ದರು. ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
್ತಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೀಶನರಾವ ಪಾಟೀಲ ಇಂಚೂರಕರ, ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಿಂದಲೇ ವೀರಯೋಧರಾಗಿ ಹೊರಹೊಮ್ಮಿದವರು. ಹಿಂದೂ ಧರ್ಮದ ರಕ್ಷಣೆಯ ಗುರಿ ಹೊತ್ತ ಶಿವಾಜಿ ಮಹಾರಾಜರು ತನ್ನ ಶಕ್ತಿಯಿಂದ ದೇಶದಾದ್ಯಂತ ಹೆಸರನ್ನು ಗಳಿಸಿದರು. ಶಿವಾಜಿ ಮಹಾರಾಜರ ಸಾಹಸದ ಕಥೆಗಳು ಭಾರತೀಯರಿಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು.
ಮುಖಂಡ ಜನಾರ್ಧನರಾವ ಬಿರಾದಾರ ಮಾತನಾಡಿ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರು ಹಿಂಧೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಇಂದಿನ ಯುವಕರಿಗೆ ಪ್ರೇರಣಾದಾಯಕವಾಗಿದೆ ಎಂದು ಎಂದು
ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣ ಭಾರತದ ಹಿಂದೂ ದೇವಾಲಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು.
ಮನವಿ: ಬಸವ ಕಲ್ಯಾಣದಲ್ಲಿ ಮಾರ್ಚ 04 ಮತ್ತು 05 ರಂದು ನಡೆಯುವ ರಾಷ್ಟ್ರೀಯ ಲಿಂಗಾಯತ ಮಹಾಧಿವೇಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಡಾ.ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದರು.
ಕಲ್ಯಾಣ ನಾಡಿನ ಜನರಿಗೆ ಕರೆ ನೀಡಿದರು. ಬಸವಕಲ್ಯಾಣ ಲಿಂಗಾಯತ ಧರ್ಮ ಉದಯವಾದ ಪುಣ್ಯಭೂಮಿ ಬಸವಾದಿ ಶರಣರ ವಾಸ್ತವ್ಯದಿಂದ ಪುನೀತವಾದ ಅವಿಮುಕ್ತ ಕ್ಷೇತ್ರ. ಅಂತಹ ನೆಲದಲ್ಲಿ ಲಿಂಗಾಯತ ಅಧಿವೇಶನ ಆಗುತ್ತಿರುವುದು ನಮ್ಮೆಲ್ಲರಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಜೊತೆಗೆ ಅದನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವ ಮಹೋನ್ನತ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಈ ಅಧಿವೇಶನಕ್ಕೆ ಎಂಟು ರಾಜ್ಯಗಳಿಂದ ಬಸವಭಕ್ತರು ಆಗಮಿಸುತ್ತಿದ್ದಾರೆ.
ಸನ್ಮಾನಿತರು.ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ಪ್ರಸಾದ ದಾಸೋಹಿಗಳಾದ ಸವಿತಾ ಕಪಿಲ ಕಲ್ಯಾಣೆ, ವಿಜಯಲಕ್ಷ್ಮಿ ವಿಜಯಕುಮಾರ ಪರ್ಮಾ, ರೇಖಾಬಾಯಿ ರಾಜಶೇಖರ ಅಷ್ಟೂರೆ, ಮಲ್ಲಮ್ಮ ಸನ್ಮುಖಪ್ಪ ಪಾವಡಶೆಟ್ಟೆ, ರೇಖಾ ಲಿಂಗರಾಜ ವಡಗೇರೆ, ವಿಜಯಲಕ್ಷ್ಮಿ ಸಂಗಮೇಶ ಬಿರಾದಾರ, ಶಾಮಲಾ ವೈಜಿನಾಥ ಮೇತ್ರೆ, ವಿದ್ಯಾವತಿ ಮಡಿವಾಳಯ್ಯ ಹಿರೇಮಠ, ಜಯಶ್ರೀ ಶಂಕರ ಕೆರೆ, ಜ್ಞಾನದೇವಿ ಬಸವರಾಜ ಮರೆ, ಸುನಂದಾ ಬಸವರಾಜ ಥಮಕೆ, ಶೋಭಾವತಿ ಶಿವರಾಜ ಚಿಂಚೋಳೆ,ಸುಮನಬಾಯಿ ಬಾಬುರಾವ ಜಲ್ದೆ,ಶ್ರೀದೇವಿ ಸಂಗಮೇಶ ಕುಂಬಾರ,ವಿಜಯಲಕ್ಷ್ಮೀ ಗಣಪತರಾವ ಬೋಚರೆ ದಂಪತಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.ವಿಶ್ವನಾಥಪ್ಪ ಬಿರಾದಾರ,ಕಾಶಿನಾಥ ಭೂರೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವೀರಣ್ಣ ಕುಂಬಾರ ಸ್ವಾಗತಿಸಿದರು.ಯಲ್ಲನಗೌಡ ಬಾಗಲಕೋಟ ವಚನ ಸಂಗೀತ ನಡೆಸಿಕೊಟ್ಟರು. ದೀಪಕ ಥಮಕೆ ನಿರೂಪಿಸಿದರು.
ತಾಯಿ ಸಂಸ್ಕಾರ ಮುಖ್ಯ …..
“ಹೆತ್ತವರ ವರ್ತನೆ ಮಕ್ಕಳ ಮೇಲೆ ಬಹು ಬೇಗ ಪರಿಣಾಮ ಬೀರುತ್ತದೆ. ಶಿವಾಜಿಯ ತಾಯಿ ರಾಜಮಾತೆ ಜಿಜಾವು ಮಗನಲ್ಲಿ ಧೈರ್ಯ, ಶೌರ್ಯ,ಸಹನೆ, ರಾಷ್ಟ್ರೀಯತೆಯ ಬೀಜ ಬಿತ್ತಿ ವೀರ ಸಾಮ್ರಾಟನಾಗಿ ಮಾಡಿದಳು. ಪಾಲಕರು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಸಂಸ್ಕಾರ ತುಂಬಿ ರಾಷ್ಟ್ರದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು.”- ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬ.ಕಲ್ಯಾಣ.