ಮಕ್ಕಳೊಂದಿಗೆ ತಾಯಿ ನಾಪತ್ತೆ

ಬ್ರಹ್ಮಾವರ, ಡಿ.೨೧- ಮಹಿಳೆಯೊಬ್ಬರು ತನ್ನ ಮೂರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಹಾರಾಡಿ ಗ್ರಾಮದ ಹೊನ್ನಾಳ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಹೊನ್ನಾಳ ಬಕ್ಕಪಟ್ಟಣ ನಿವಾಸಿ ಮುಹಮ್ಮದ್ ಖಲೀಲ್ ಎಂಬವರ ಪತ್ನಿ ರಾಸಿಯಾ (೩೨), ಮಕ್ಕಳಾದ ಪಾತಿಮಾ ನಶ್ರಾ (೧೧), ಅಬ್ದುಲ್ ಮುತ್ತಾಹೀರ್ (೭), ಆಯಿಷಾ ಝಿಫ್ರಾ (೩) ಎಂದು ಗುರುತಿಸಲಾಗಿದೆ. ರಾಸಿಯಾ ಡಿ.೧೮ರಂದು ಬೆಳಗ್ಗೆ ತನ್ನ ಮೂರು ಮಕ್ಕಳೊಂದಿಗೆ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.