ಮಕ್ಕಳೇ ನಮ್ಮ ದೇಶದ ಸಂಪತ್ತು: ಯಶೋಧಾ ಕಟಕಿ

ಭಾಲ್ಕಿ:ಫೆ.29: ಪುಟಾಣಿ ಮಕ್ಕಳೇ ನಮ್ಮ ದೇಶದ ಬಹುದೊಡ್ಡ ಸಂಪತ್ತಾಗಿದ್ದಾರೆ ಎಂದು ಪಿಎಸ್‍ಐ ಯಶೋಧಾ ಕಟಕಿ ಕರಾಟೆ ಅಭಿಪ್ರಾಯಪಟ್ಟರು.
ಪಟ್ಟಣದ ಸನ್‍ಬೀಮ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 3ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಬಹುದೊಡ್ಡ ಸಂಪತ್ತು ಮಕ್ಕಳಾಗಿದ್ದಾರೆ. ಈ ಸಂಪತ್ತು ಬೆಳೆಯಬೇಕಾದರೆ ವಿದ್ಯಾ ಸಂಪತ್ತು ಮತ್ತು ಜ್ಞಾನ ಸಂಪತ್ತಿನೊಂದಿಗೆ ಸಂಸ್ಕಾರ ಸಂಪತ್ತು ನೀಡಬೇಕಿದೆ. ಇದು ನಮ್ಮ, ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳು ಹೆಚ್ಚಿನ ಸಮಯ ತಾಯಂದಿರ ಜೊತೆಯಲ್ಲಿ ಕಳೆಯುತ್ತಾರೆ. ಹೀಗಾಗಿ ದೇಶದ ಉತ್ತಮ ಸಂಪತ್ತು ಬೆಳೆಸುವ ಹೊಣೆ ನಮ್ಮ ತಾಯಂದಿರಮೇಲಿದೆ ಎಂದರು. ಒಬ್ಬ ಗಂಡು ಮಗನ ಸಾಧನೆಯಹಿಂದೆ ಹೆಣ್ಣುಮಕ್ಕಳಾದ ತಾಯಿ, ಹೆಂಡತಿ, ಅಕ್ಕ, ತಂಗಿಯರ ಶ್ರಮ ಅಡಗಿದೆ. ಅದಕ್ಕಾಗಿ ಹೆಣ್ಣುಮಕ್ಕಳು ನಾವು ಯಾವುದರಲ್ಲಿಯೂ ಕಮ್ಮಿಯಲ್ಲ ಎನ್ನುವ ಭಾವ ನಮ್ಮಲ್ಲಿರಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಥಮಾದ್ಯತೆ ಕೊಡಬೇಕು. ಸನ್‍ಬೀಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಷಗಳಿಂದ ಉತ್ತಮ ಶಿಕ್ಷಣ ಒದಗಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಪ್ರತಿವರ್ಷ ಹೆಚ್ಚಿನ ಸಂಖೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ದೃಶ್ಯಮಾಧ್ಯಮಗಳಿಂದ ದೇಶಿಯ ಸಂಸ್ಕøತಿ ನಸಿಸುತ್ತಲಿದೆ. ನಮ್ಮ ಹೆಣ್ಣುಮಕ್ಕಳು ಧಾರಾವಾಹಿ ನೋಡುತ್ತಾ ಕುಳಿತರೆ ಎಲ್ಲವನ್ನೂ ಮರೆಯುತ್ತಾರೆ ಇದರಿಂದ ಅನುಕೂಲಕ್ಕಿಂತ ಅನಾನೂಕೂಲವೇ ಜಾಸ್ತಿ. ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವಲ್ಲಿ ಹೆಚ್ಚಿನ ಸಮಯ ಕಳೆಯಬೇಕು. ನಮ್ಮ ದೇಶದ ರೈತ, ಸೈನಿಕ, ದೇಶಕ್ಕಾಗಿ ಮಡಿದ ಮಹನೀಯರನ್ನು ನಮ್ಮ ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಮಾಹಾಲಿಂಗ ಕಾಶಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕಿ ವಿಶಾಲಾಕ್ಷಿ ಮಾಹಾಲಿಂಗ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ಪುಟಾಣಿ ಮಕ್ಕಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನ ತಣಿಸಿತು. ಕಾರ್ಯಕ್ರಮದಲ್ಲಿ ವಿಶ್ವಾರಾಧ್ಯ ಕಾಶಿಸ್ವಾಮಿ, ತೋಟಗಾರಿಕೆ ಇಲಾಖೆಯ ಮುಖ್ಯಸ್ಥರಾದ ಓಂಪ್ರಕಾಶ ಮೋರೆ, ಸಂದೀಪ.ಬಿ, ಶಿಲ್ಪಾ ಶಿವಪುತ್ರ, ಅರ್ಚನಾ ಮತ್ತಿರರು ಇದ್ದರು.
ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಆರತಿ ಪಾತ್ರೆ, ವಿದ್ಯಾರ್ಥಿಗಳಾದ ಭವಾನಿ ಮತ್ತು ಸಂಗಡಿಗರು ನಿರೂಪಿಸಿದರು. ಅರ್ಚನಾ ವಂದಿಸಿದರು.