ಮಕ್ಕಳು ಹಕ್ಕುಗಳಿಂದ ವಂಚಿತರಾಗಬಾರದು:ಶಶಿಧರ ಕೊಸಂಬಿ

ವಿಜಯಪುರ:ಮೇ.25: ಮಕ್ಕಳು ತಮ್ಮ ಯಾವುದೇ ಹಕ್ಕುಗಳಿಂದ ಪಾಲನೆ, ಪೋಷಣೆ, ಶಿಕ್ಷಣ, ರಕ್ಷಣೆಯಿಂದ ವಂಚಿತರಾಗಬಾರದು ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಬೆಳಗಾಂವಿ ವಿಭಾಗೀಯ ಉಸ್ತುವಾರಿಯಾದ ಶಶಿಧರ ಕೊಸಂಬಿ ಅವರು ನುಡಿದರು.
ಮನಗೂಳಿ ರಸ್ತೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ವಿಶೇಷ ಭೇಟಿ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಾಲ ಕಾರ್ಮಿಕತೆ, ಬಾಲ್ಯವಿವಾಹ, ಕಳ್ಳಸಾಗಾಣಿಕೆ, ದೇವದಾಸಿ ಪದ್ದತಿ, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು. ತಮ್ಮ ಸಮಿತಿಗೆ ಬಂದ ಪ್ರಕರಣಗಳನ್ನು ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಬೇಕೆಂದು ತಿಳಿಸಿದರು. ಹಾಗೂ ರಾಜ್ಯದಲ್ಲಿ ವಿಜಯಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿ ಅವರು ಮಾಲಾರ್ಪಣೆ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯು ಅಧಿಕಾರಿಗಳ ಪೋಲಿಸ ಇಲಾಖೆಯ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ, ಉತ್ತಮ ಕಾರ್ಯನಿರ್ವಹಿಸುತ್ತಿದೆ. ಸಂತ್ರಸ್ತ ಮಕ್ಕಳಿಗೆ ಹಾಗೂ ಕುಟುಂಬಗಳಿಗೆ ನ್ಯಾಯ ಒದಗಿಸಿದ ತೃಪ್ತಿಯಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ದಾನೇಶ ಅವಟಿ, ಯಲ್ಲಪ್ಪ ಇರಕಲ್ಲ ಸಾಂದರ್ಭಿಕವಾಗಿ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಾವಿತ್ರಿ ಗುಗ್ಗರಿ, ಅಧಿಕ್ಷಕಿ ವಿ.ಜಿ. ಮಾನೆ, ಸರ್ವಮಂಗಳಾ ಹಿರೇಮಠ, ಮಧುಮತಿ ಜಂಗಮಶೆಟ್ಟಿ, ಸುಪರ್ಣಾ ಜಾಧವ, ವಾಣಿಶ್ರೀ ನಿಂಬಾಳ, ಪದ್ಮಾ ಬೋಗಾರ, ಲಲಿತಾ ಗೌಡರ, ಗೀತಾ ದೊಡಮನಿ, ಸೈಪುದ್ದಿನ ಶಾರಪಾದೆ, ರಾಮು ಕಟ್ಟಿಮನಿ, ಮೌನೇಶ ಪೊದ್ದಾರ, ಸತೀತ ಝಳಕಿ, ಗುರುರಾಜ ಇಟ್ಟಗಿ, ಚಿದಾನಂದ ಮೆಂಡೆಗಾರ, ನತಿಮ ರಾಠೋಡ, ಹೊನಮೋಡೆ, ಸಂತೋಷ ಚಾಂದಕವಟೆ ಮತ್ತಿತರರು ಉಪಸ್ಥಿತರಿದ್ದರು