
ಕಲಬುರಗಿ,ಸೆ.13: ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಒಳ್ಳೆಯ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಶೋಭಾ ದೇಶಪಾಂಡೆ ಅವರು ಹೇಳಿದರು.
ನಗರ್ ಜೀವನ ಪ್ರಕಾಶ ಪ್ರೌಢಶಾಲೆ,ಯಲ್ಲಿ ಮೊಟ್ಟ ಮೊದಲ ಬಾರಿಗೆ 2002 ಮತ್ತು 2003 ನೆಯ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಗೆಳೆಯರ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಇಂಥ ಕಾರ್ಯಕ್ರಮ ತುಂಬಾ ಖುಷಿ ನೀಡುತ್ತದೆ ಮತ್ತು ವಿದ್ಯಾರ್ಥಿಗಳು ಉತ್ತಮ ಸ್ಥಾನಕ್ಕೆ ಬೆಳೆದು ಏನು ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿಕೊಡುತ್ತಾರೆ ಎಂದು ಹೇಳಿದರು.
ಶಿಕ್ಷಕಿ ಶ್ರೀಮತಿ ವನಮಾಲಾ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮುಂದೆ ಇನ್ನೂ ಎತ್ತರಕ್ಕೆ ಬೆಳೆಯುವ ಕನಸು ಇಟ್ಟುಕೊಳ್ಳಬೇಕು ಎಂದರು.
ನಂತರ ಜೋಸೆಫ್ ರವರು ಮಾತನಾಡಿ ಓದು ಮತ್ತು ಯಶಸ್ಸು ಯಾವತ್ತೂ ನಿಲ್ಲಬಾರದು ಎಂದು ಹೇಳಿದರು.
ರಾಘವೇಂದ್ರ ರವರು ಮಾತನಾಡಿ ಕೆಲವು ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತಾ, 10 ನೆಯ ತರಗತಿಯ ಮಕ್ಕಳಿಗೆ ಕನಸನ್ನು ಇಟ್ಟುಕೊಂಡು ಅದನ್ನು ಪೂರ್ತಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನವನ್ನು ಹೊ0ದಿದ್ದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಆದ ಅಮರೇಶ್ವರ ರವರು ಮಾತನಾಡಿ 2002 ಮತ್ತು 2003 ನೆಯ ಸಾಲಿನ ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಮಕ್ಕಳಿಗೆ ಪರಿಚಯಿಸಿದರು.
ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಗಿದ್ದು, ಇತಿಹಾಸ ನಿರ್ಮಾಣ ಆಗಿದೆ. ಇದು ಇನ್ನುಳಿದ ಹಳೆಯ ವಿದ್ಯಾರ್ಥಿಗಳಿಗೆ ಒಂದು ಪ್ರೇರಣೆ. ಇನ್ನೂ ಉನ್ನತ ಮಟ್ಟಕ್ಕೆ ನಮ್ಮ ಶಾಲೆಯ ಮಕ್ಕಳು ಬೆಳೆದರೆ ಅದುವೇ ಅವರಿಗೆ ಸಲ್ಲುವ ನಿಜವಾದ ಗೌರವ ಎಂದು ತುಂಬಾ ಅರ್ಥಪೂರ್ಣವಾಗಿ ಹೇಳಿದರು.
ಜೀವನ ಪ್ರಕಾಶ ಶಾಲೆಯ ಎಲ್ಲಾ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನ ಮಾಡಿ, ನೆನಪಿನ ಕಾಣಿಕೆಗಳನ್ನು ನೀಡುವುದರೊಂದಿಗೆ ಗೌರವಿಸಲಾಯಿತು.
ನಂತರ 2002 ಮತ್ತು 2003 ನೆಯ ಸಾಲಿನ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಶ್ರೀ ವಿಶ್ವನಾಥ ಸಾಲಿಮಠ, ಡಾ ಮಲ್ಲಿಕಾರ್ಜುನ ಪೂಜಾರಿ ಮತ್ತು ಶಿಲ್ಪಾ ಜಿ. ರವರು ಮಾತನಾಡಿದರು. ಡಾ ಸಂತೋಷ ರಾಠೋಡ ರವರು ಶಾಲೆಯ ಕುರಿತಾದ ಅದ್ಭುತ ಕವಿತೆ ವಾಚನ ಮಾಡಿದರು.
ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತಾವು ಕಲಿತಿರುವ ಶಾಲೆಗೆ ಸಾಮೂಹಿಕವಾಗಿ ಕುರ್ಚಿಗಳು ಮತ್ತು ಅಲ್ಮಾರಾವನ್ನು ಉಡುಗೊರೆಯಾಗಿ ನೀಡಿದರು.
ಅಂಬರೀಷ ವಾಲಿ ರವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನು ಡಾ ಸಂತೋಷ ರಾಠೋಡ ರವರು ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ 2002 ಮತ್ತು 2003 ನೆಯ ಸಾಲಿನಲ್ಲಿ ಓದಿರುವ ಎಲ್ಲಾ ವಿದ್ಯಾರ್ಥಿಗಳು, ಪ್ರಸ್ತುತ ಜೀವನ ಪ್ರಕಾಶ ಶಾಲೆಯಲ್ಲಿ ಓದುತ್ತಿರುವ 10 ನೆಯ ತರಗತಿಯ ವಿದ್ಯಾರ್ಥಿಗಳು ಮತ್ತು ಶಾಲೆಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.