ಮಕ್ಕಳು ಮೆಚ್ಚಿದ ಶಿಕ್ಷಕರು” ಪ್ರಶಸ್ತಿಗೆ ಆಯ್ಕೆ

ಮುದ್ದೇಬಿಹಾಳ:ಸೆ.25: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯಪುರ ಸಿಂದಗಿ ಘಟಕಗಳ ಸಹಯೋಗದಲ್ಲಿ ನೀಡಲಾಗುವ ಮಕ್ಕಳು ಮೆಚ್ಚಿದ ಶಿಕ್ಷಕರು ಪ್ರಶಸ್ತಿಗೆ ತಾಲ್ಲೂಕಿನ ನಾಲತವಾಡದ ದೇಶಮುಖರ ಓಣಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಶಿವಲಿಂಗಪ್ಪ ಗಡೇದ ಹಾಗೂ ಹುಲ್ಲೂರ ತಾಂಡಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಮೀನಾಕ್ಷಿ ರೇವಣಸಿದ್ದಯ್ಯ ವಸ್ತ್ರದ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸೆ.26 ರಂದು ಭಾನುವಾರ ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಸಭಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪರಿಷತ್ತಿನ ಮುದ್ದೇಬಿಹಾಳ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ ಮಹಾಂತೇಶ ಬಂಗಾರಗುಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನಂದನೆ: “ಮಕ್ಕಳು ಮೆಚ್ಚಿದ ಶಿಕ್ಷಕರು” ಪ್ರಶಸ್ತಿಗೆ ಆಯ್ಕೆಯಾದ ಮಲ್ಲಿಕಾರ್ಜುನ ಗಡೇದ ಹಾಗೂ ಮೀನಾಕ್ಷಿ ವಸ್ತ್ರದ ಅವರನ್ನು ತಾಲ್ಲೂಕು ಶಿಕ್ಷಣಾಧಿಕಾರಿ ವೀರೇಶ ಜೇವರಗಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುದ್ನೂರ ಮತ್ತು ತಾಲ್ಲೂಕಿನ ಸಮಸ್ತ ಶಿಕ್ಷಕರು ಅಭಿನಂದಿಸಿದ್ದಾರೆ