ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು 


ಸಂಜೆವಾಣಿ ವಾರ್ತೆ

ಹೊನ್ನಾಳಿ.ಅ.೧೯; ; ಹೊನ್ನಾಳಿ ತಾಲೂಕಿನ ಹೊಳೆ ಮದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದನದ ಕೊಟ್ಟಿಗೆಯಾಗಿದೆ ಕಟ್ಟಡವಿಲ್ಲದೆ ಮೂರು ವರ್ಷಗಳಿಂದ ಗ್ರಾಮದ ದೇವಸ್ಥಾನದಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತಿದ್ದಾರೆ ಇದೆಲ್ಲ ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಇದುವರಿಗೋ ಕ್ರಮ ತಗೆದುಕೊಂಡಿಲ್ಲ. ಈ ಶಾಲೆಗೆ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿ ಗಮನಿಸಿ ಮಾಹಿತಿ ಪಡೆದಿದ್ದೆವೆ ಈ ದುಸ್ಥಿತಿಗೆ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಪಿ ಡಿ ಒ. ಗ್ರಾಮ ಪಂಚಾಯಿತಿ ಮತ್ತು ತಾಲೂಕಿನ ಶಾಸಕರು ಕಾರಣರಾಗಿದ್ದಾರೆ ಎಂದು ಹೊನ್ನಾಳಿ ಜೆ ಎಂ ಎಫ್‌ ಸಿ  ನ್ಯಾಯಧೀಶರಾದ ದೇವದಾಸ್‌ ತಿಳಿಸಿದರು.
ಹೊನ್ನಾಳಿಯ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನೆಡೆದ ಕಾನೂನು ಸೇವಾ ಪ್ರಾಧಿಕಾರ ಹೊನ್ನಾಳಿ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತಾನಾಡಿದ ನ್ಯಾಯಧಿಶರು ಈಗಾಗಲೇ ಶಾಲೆಯ ಕೊಠಡಿಯ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದೆ ಶಿಕ್ಷಕರು, ಪಿ ಡಿ ಒ ,ಗುಣಮಟ್ಟದಲ್ಲಿ ಕಟ್ಟಡ ಕಟ್ಟುವಂತೆ ನೋಡಿಕೊಳ್ಳಿ .ನ್ಯಾಮತಿ ತಾಲೂಕಿನ ಸೋರಗೊಂಡನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಭೇಟಿ ನೀಡಿದ್ದೆವೆ ಅಲ್ಲಿನ ಕಟ್ಟಡದಲ್ಲಿ ಸಿಮೆಂಟಿನ ಪ್ರಮಾಣ ಕಡಿಮೆಯಿದೆ ಅಲ್ಲಿನ ಶೌಚಾಲಯ ನೋಡಿದ ನಮಗೆ ವಾಂತಿ ಬರುವಂತೆ ಅಗುತ್ತದೆ ಇನ್ನು ಮಕ್ಕಳ ಪರುಸ್ಥಿತಿ ಏನು ?…ಶಾಲೆಯ ಮೂಲಭೂತ ಸೌಕರ್ಯಗಳ ಸಮಸ್ಸೆ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯಿತಿ ಪಿಡಿಒ , ಮತ್ತು ಶಿಕ್ಷಣ ಇಲಾಖೆ ಗಮನಕ್ಕೆ ಮನವಿ ಮಾಡಿ ಅವರು ಸ್ಪಂದಿಸದಿದ್ದರೆ ನ್ಯಾಯಲದ ಗಮನಕ್ಕೆ ಸಮಸ್ಸೆಯ ಸಂಬಂದ ಪಟ್ಟ ಒಂದು ಪೊಟೂ ಹಾಗೂ ಒಂದು ಅರ್ಜಿ ಕೊಡಿ ನಾನೆ ಸಂಬಂದ ಪಟ್ಟ ಅಧಿಕಾರಿಗಳಿಂದ ಕೆಲಸ ಆಗುವಂತೆ ಮಾಡಿಸುತ್ತೆವೆ.ಸರ್ಕಾರಿ ಹೆಸರಲ್ಲಿರುವ ಶಾಲೆಯ ನಿವೇಶನವನ್ನು ಶಾಲೆಯ ಹೆಸರಿಗೆ ಮಾಡಲು ಸ್ಥಳದಲ್ಲಿದ್ದ ತಾಲೂಕು ದಂಡಾಧಿಕಾರಿಗಳಿಗೆ ತಿಳಿಸಿ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದಂತೆ ಒಂದು ಭೋರ್ಡ್‌ ಹಾಕಿಸಿ ಯಾರಾದರೂ ಆವರಣದಲ್ಲಿ ಸಾರ್ವಜನಿಕರು ಆಟ ಆಡುವುದು ಮಲಿನಗೊಳಿಸುವುದು ಕಂಡುಬಂದರೆ ಪೊಲೀಸ್‌ ಇಲಾಖೆ ಗಮನಕ್ಕೆ ತನ್ನಿಒಟ್ಟಾರೆ ಮಕ್ಕಳ ಹಕ್ಕುಗಳಿಗೆ ಮಾನ್ಯತೆ ನೀಡಿ ಮಕ್ಕಳ ಮೂಲಭೂತ ಸೌಕರ್ಯಗಳ ಕಡೆ ಎಸ್‌ ಡಿ ಎಂಸಿ, ಸಮಿತಿ, ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಹೆಚ್ಚನ ಗಮನ ನೀಡಬೇಕು ನೀವೂ ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ನಿಮ್ಮ ವಿರುದ್ದ ದೂರು ದಾಖಾಲಿಸಲಾಗುವುದು ಎಂದರು