ಮಕ್ಕಳು ಭೂಮಿ ಮೇಲಿನ ಹೂಗಳು-ಶಿವಾಜಿ ಮೋರೆ

ವಿಜಯಪುರ, ನ.17- ಮನಗೂಳಿ ಪಟ್ಟಣದ ಕಾನ್ಫಿಡೆಂಟ್ ಸ್ಪರ್ಧಾ ಕೋಚಿಂಗ್ ಕ್ಲಾಸಿನಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ ಗುಜಗೊಂಡ ಮುಖ್ಯ ಅತಿಥಿಗಳಾದ ಶಿವಾಜಿ ಮೋರೆ ಮಾತನಾಡಿ ಮಕ್ಕಳು ಭೂಮಿಯ ಮೇಲಿನ ಹೂಗಳು ಮಕ್ಕಳಲ್ಲಿ ಹೂವಿನಂತಹ ಮನಸ್ಸಿರುತ್ತದೆ. ಆದ್ದರಿಂದ ಶಿಕ್ಷಕರು ಶಾಲಾ ಪಠ್ಯಪುಸ್ತಕದ ಜೊತೆಗೆ ಮಕ್ಕಳಿಗೆ ದೇಶಾಭಿಮಾನ, ಭಾಷಾಭಿಮಾನ, ಒಳ್ಳೆಯ ಸಂಸ್ಕಾರ ಹಾಗೂ ಮಾನವೀಯ ಮೌಲ್ಯದ ಗುಣಗಳನ್ನು ಬಿತ್ತಿದಾಗ ಅಮೂಲ್ಯವಾದ ರತ್ನದಂತೆ ಹೂವುಗಳು ಅರಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ಪು ನಾಮನೆ, ಚಂದ್ರಶೇಖರ ಮಾಚಕನೂರ, ಮಹಾದೇವ ಪತ್ತಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯಗುರುಗಳಾದ ವಿಶ್ವನಾಥ ಬನ್ನೂರ ಮತ್ತು ಬಸವರಾಜ ಚಿಮ್ಮಲಗಿ ಸಂಗಮೇಶ ಗೆಣ್ಣೂರ ಹಾಗೂ ಗುರುಮಾತೆಯರಾದ ಶೃತಿ ಬನ್ನೂರ, ಲಕ್ಷ್ಮೀ ಹತ್ತರಕಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶರಣರ ವಚನಗಳು ಮತ್ತು ದೇಶಭಕ್ತಿ ಗೀತೆಗಳನ್ನು ಮುಗ್ದಮಕ್ಕಳು ಹಾಡುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು