ಮಕ್ಕಳು ಪ್ರತಿಭಾವಂತರಾಗಲು ಪಾಲಕರು ಹಾಗೂ ಶಿಕ್ಷಕರು ಪ್ರಮುಖ

ಮುನವಳ್ಳಿ,ಜ16 : ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ, ನಡತೆ ಮಕ್ಕಳ ಬದುಕಿಗೆ ಮುನ್ನುಡಿಯಾಗುತ್ತದೆ ಮಕ್ಕಳು ಪ್ರತಿಭಾವಂತರಾಗಲು ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಶ್ರೀಗಳು ಹೇಳಿದರು.
ಪಟ್ಟಣದ ಎಮ್.ಎಲ್.ಎಸ್ ಆಂಗ್ಲ ಮಧ್ಯಾಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿ ಮಾತನಾಡಿದರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನೆ, ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಜ್ಞಾನದ ಜತೆಗೆ ಮೌಲ್ಯಗಳಿಗೂ ಆದ್ಯತೆ ನೀಡಿ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಬೆಳೆಸಬೇಕು ವಿದ್ಯಾರ್ಥಿಗಳು ಪಾಲಕರ ಅಶೊತ್ತರಗಳಿಗೆ ಸ್ಪಂದಿಸಿ ಉತ್ತಮ ಶಿಕ್ಷಣ ಪಡೆದು ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಚೇರ್ಮನ ಉಮೇಶ ಬಾಳಿ ಗ್ರಾಮೀಣ ಮಕ್ಕಳಿಗೆ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದ್ದರಿಂದ ಅನೇಕ ಸರಕಾರಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಶಾಲೆಯಲ್ಲಿ ವಿವಿದ ಸಾಂಸ್ಕಸೃತಿಕ ಶೈಕ್ಷಣಿಕ ಕ್ರೀಡಾ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ನ್ಯಾಯವಾದಿ ಜಮುನಾ ಪಟ್ಟಣ, ನಿವೃತ್ತ ಉಪನ್ಯಾಸಕ ಡಾ. ವಿ.ಎಸ್.ಕಟ್ಟಿಮಠ, ಅಶೋಕ ಪೂಜಾರಿ ಮಾತನಾಡಿದರು.
ಆಡಳಿತಾಧಿಕಾರಿ ಎಚ್.ಕೆ.ಯಡೋಳ್ಳಿ, ಮುಖ್ಯಶಿಕ್ಷಕ ಎ.ವಿ.ರೋಣದ, ಶಿಕ್ಷಕರಾದ ನಿರ್ಮಲಾ ಗದ್ವಾಲ್, ಎ.ವಿ.ನರಗುಂದ, ರಾಜಶೇಕರ ಮಲ್ಲಾಪುರಮಠ, ಮಹಾಂತೇಶ ಭಾಣಿ, ಪಾಲಕರು, ಮಕ್ಕಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.