ಮಕ್ಕಳು ಪೋಷಕರ ವಿಶ್ವಾಸ ಉಳಿಸಿಕೊಳ್ಳಬೇಕು: ಶಾಸಕ ದೊಡ್ಡಗೌಡರ

ಚನ್ನಮ್ಮನ ಕಿತ್ತೂರ,ಮಾ13: ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಿ ಗುರು, ತಂದೆ-ತಾಯಿ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನೂತನ ಕೊಠಡಿಯ ಭೂಮಿಪೂಜೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದವರು ಪೋಷಕರಿಗೆ ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಾರೆ. ಅವರ ಕಷ್ಟ ಅರಿತು ಮಕ್ಕಳು ತಂದೆ-ತಾಯಿ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು.
ರಾಜ್ಯ 7000 ಶಾಲೆಗಳ ಕೊಠಡಿ ನಿರ್ಮಾಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಕಿತ್ತೂರು ಕ್ಷೇತ್ರ ಸುಮಾರು 40 ಶಾಲಾ ಕೊಠಡಿಗಳು ಮಂಜುರಾಗಿದ್ದು ಇದರಲ್ಲಿ ಎರಡು ಕೊಠಡಿ ಉರ್ದು ಶಾಲೆಗೆ ನೀಡಲಾಗಿದೆ.
ಈ ವೇಳೆ ಭೂದಾನಿಗಳಾದ ಫಹಮೀದಾ ಅಜ್ಯತುಲ್ಲಾ ಕಾಸ್ಮಿ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮ ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮಡಿವಾಳ ರಾಜಯೋಂದ್ರ ಸ್ವಾಮಿಜೀ ಹಾಗೂ ಮುಫ್ತಿ ಇನಾಮುಲ್ಲಾ ಹಸನಸಾಬ, ಸಾನಿಧ್ಯ ವಹಿಸಿದ್ದರು.
ಈ ವೇಳೆ ಶಿಕ್ಷಣಾಧಿಕಾರಿ ಆರ್,ಟಿ. ಬಳಿಗಾರ, ಬಸವರಾಜ ನಾಲತವಾಡ, ಗಾಂiÀiತ್ರಿ ಅಜ್ಜನವರ, ಹಬೀಬಶೀಲ್ಲೆದಾರ್, ಮನಸೂರ ಸೈಯದ, ಪ್ರದೀಪ್ ಶೆಟ್ಟಿ, ಅತುಲ್ ಗಡಕಾರಿ, ಚಾಂದ ಗಂಗಾವತಿ, ಪರಹ ಬೇಗಂ, ಸೈಯದ್, ಏಫ್ ಎಂ ಜಕಾತಿ, ಮುಸ್ತಾಕ ಸವನೂರ, ಅಮೀರ ಹಮಾಜ, ಹಾವನೂರ, ಗಂಜಾನಂದ ಸೊಗಲನ್ನವರ, ಈಶ್ವರ ಹುಪ್ಪರಿ, ಎಸ್ ಎ ಸೌದಾಗರ, ಎ ಎಸ್ ಜರ್ಮನ್, ಬೀಬಿಸೂಪಿಯಾ ತಿಗಡೊಳ್ಳಿ ಹಲವರಿದ್ದರು.