ಮಕ್ಕಳು ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬೇಕು

ದಾವಣಗೆರೆ-ಫೆ.೨೫; ಮಕ್ಕಳು ತರಗತಿಗಳಲ್ಲಿ ಆಯಾ ವಿಭಾಗದ ವಿಷಯಗಳಲ್ಲಿ ಪ್ರತಿನಿತ್ಯ ಕರ್ತವ್ಯ ನಿಷ್ಠೆಯಿಂದ ಅಧ್ಯಯನ ಮಾಡಿ ಮನದಟ್ಟು ಮಾಡಿಕೊಂಡರೆ, ಪರೀಕ್ಷೆಯ ಸಮಯದಲ್ಲಿ ಭಯ ಪಡುವ ಅಗತ್ಯವಿಲ್ಲ ಮಕ್ಕಳು ಪರೀಕ್ಷೆಯ ಕುರಿತು ಆತಂಕಕ್ಕೆ ಒಳಗಾಗದೇ ಸಂಭ್ರಮದಿAದ ಹಬ್ಬದಂತೆ ಆಚರಿಸಿದಾಗ ಉತ್ತಮ ಫಲಿತಾಂಶ ಬಂದೇ ಬರುತ್ತದೆ. ಆದರಿಂದ ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗೆ, ಅಕ್ಷರಾಭ್ಯಾಸ ನೀಡಿದ ಗುರುಗಳಿಗೆ ನೀಡುವ ಗುರು ಕಾಣಿಕೆ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎಂದು ತ್ಯಾವಣಿಗೆಯ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಶರಣಪ್ಪ ತಮ್ಮ ಅನಿಸಿಕೆ ಹಂಚಿಕೊAಡರು.ಕಲಾಕುAಚ ಸಾಂಸ್ಕೃತಿಕ ಸಂಸ್ಥೆಯು ಇತ್ತೀಚಿಗೆ ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆಯ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬಲು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಲಾಕುಂಚದ ಈ ಶೈಕ್ಷಣಿಕ ಕಾಳಜಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.ಲಾಕುAಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಕಾರ್ಯಾಗಾರ ನಡೆಸಿಕೊಟ್ಟು ಮಾತನಾಡಿ, ಪ್ರೌಢಶಿಕ್ಷಣದ ಈ ಹಂತದಲ್ಲೇ ಮಕ್ಕಳು ಮುಂದಿನ ಸಾಧನೆಯ ಗುರಿ ಮುಟ್ಟಲು ಸಂಕಲ್ಪ, ನಿಖರವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಸಮಿತಿ ಸದಸ್ಯರಾದ ಮಮತ ಕೊಟ್ರೇಶ್ ಮಾತನಾಡಿ, ಮಕ್ಕಳೊಂದಿಗೆ ಪೋಷಕರೂ ಕರ್ತವ್ಯ ನಿಷ್ಠೆಯಿಂದ ಕಾಳಜಿಯಿಂದ ಕೈಜೋಡಿಸಿದರೆ ಮಕ್ಕಳ ಶ್ರೇಯಸ್ಸಿಗೆ ಭದ್ರವಾದ ಬುನಾದಿ ಎಂದರು.ಸಮಾರAಭದ ಪ್ರಾರಂಭದಲ್ಲಿ ಸ್ವಾಗತ ಮಾಡಿದ ಶಿಕ್ಷಕರಾದ ಎ.ಪಿ.ಲೋಕೇಶ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಶಿಕ್ಷಣ ಸಂಸೆಯ ವಿವಿಧ ವಿಭಾಗದ ಶಿಕ್ಷಕ-ಶಿಕ್ಷಕಿಯರಾದ ಮಂಜುಳಾ ಪ್ರಸಾದ್ ಬಂಗೇರ, ಜಿ.ಬಿ.ಮಂಜುನಾಥ್, ಲಕ್ಷಿö್ಮÃ, ಎಂ.ಲತಾಮಣಿ, ಡಿ.ಪಿ.ಸುಜಾತಾ ಹಿರೇಮಠ, ರಾಜಶೇಖರಪ್ಪ ಎಸ್. ಅನ್ವರ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು