ಮಕ್ಕಳು ನೌಕರಿಗಾಗಿ ಹುಡುಕದೆ ನೌಕರಿ ರಚಿಸಿ: ಸುಬ್ರಹ್ಮಣ್ಯಪ್ರಭು

ಬೀದರ:ಜೂ.3: ಇಂದು ದೇಶದಲ್ಲಿ ಪ್ರಚಲಿತ ಶಿಕ್ಷಣ, ಅತ್ಯಲ್ಪ ಸಂಪನ್ಮೂಲಕ್ಕಾಗಿ ಸ್ಪರ್ಧೆ, ಮಾರ್ಗದರ್ಶನದ ಕೊರತೆ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯಿಂದ ನಿರುದ್ಯೋಗ ಸಮಸ್ಯೆ ಉಲ್ಭಣಗೊಂಡಿದೆ. ಹೀಗಾಗಿ ಯುವಕರು ಅಧ್ಯಯನದ ನಂತರ ನೌಕರಿಗಾಗಿ ಹುಡುಕಾಡದೆ ಸ್ವತಃ ನೌಕರಿಯನ್ನು ರಚಿಸಿ ನೂರಾರು ಜನರ ಕೈ ಬಲಪಡಿಸಬೇಕೆಂದು ಸಹಾರ್ದಾ ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿ ನಿರ್ದೇಶಕ ಸುಬ್ರಹ್ಮಣ್ಯಪ್ರಭು ತಿಳಿಸಿದರು.
ಕರಾಶಿ ಸಂಸ್ಥೆಯ ಅಡಿಯಲ್ಲಿನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಾಣಿಜ್ಯ ವಿಭಾಗ, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಗುರುನಾನಕ ಪ್ರಥಮ ದರ್ಜೆ ಕಾಲೇಜಿನ ಸಹಕಾರದಲ್ಲಿ ಆಯೋಜಿಸಿದ ಉದ್ಯಮಶೀಲತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದು ಯುವಕರು ತನಗೆ ಸರ್ಕಾರಿ ನೌಕರಿಯೇ ಬೇಕೆಂದು ಹಠ ಹಿಡಿಯುತ್ತಾರೆ. ಆದರೆ ಕೆಲವೇ ನೌಕರಿಗಾಗಿ ಲಕ್ಷಾಂತರ ಯುವಕರು ಅರ್ಜಿ ಸಲ್ಲಿಸುತ್ತಾರೆ. ಎಲ್ಲರಿಗೂ ಸರ್ಕಾರ ಹುದ್ದೆಗಳನ್ನು ಕೊಡಲು ಸಾಧ್ಯವಿಲ್ಲ. ಹೀಗಾಗಿ ನೌಕರಿ ಮಾಡಿದರೆ ನಾವು ಮತ್ತು ನಮ್ಮ ಕುಟುಂಬ ಬದುಕಬಹುದು. ಆದರೆ ಅದೇ ಹುದ್ದೆಗಳನ್ನು ರಚಿಸಿದರೆ ನೂರಾರು ಬಡ ಕುಟುಂಬಗಳ ಕೈ ಬಲಪಡಿಸಿದಂತಾಗುತ್ತದೆ ಎಂದು ಪೆÇ್ರೀತ್ಸಾಹದಾಯಕ ಮಾತುಗಳನ್ನಾಡಿದರು.
ಕರ್ನಾಟಕ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಶೆಟಕಾರ ಮಾತನಾಡಿ ಇದೇ ಕಾಲೇಜಿನಲ್ಲಿ ಓದಿ ಹೊರ ಬಂದ ಮೇಲೆ ನೌಕರಿಗಾಗಿ ಅಲೆದಾಡದೆ ಕೇವಲ 5 ಸಾವಿರ ರೂಪಾಯಿಯಿಂದ ಉದ್ಯೋಗ ಆರಂಭಿಸಿ ಇಂದು ನೂರಾರು ಯುವಕರಿಗೆ ಕೆಲಸ ನೀಡಿದ ತೃಪ್ತಭಾವ ನನಗಿದೆ. ಆತ್ಮಬಲ, ಧೈರ್ಯ ಮತ್ತು ಪರಿಶ್ರಮ ನಮ್ಮ ಉದ್ಯೋಗವನ್ನು ಬೆಳೆಸುತ್ತದೆ ಎಂದರು.
ಗುರುನಾನಕ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ಯಾಮಲಾ ವಿ ದತ್ತಾ, ಕರಾಶಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಸಿದ್ಧರಾಜು ಪಾಟೀಲ ಮಾತನಾಡಿದರು.
ಕರ್ನಾಟಕ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ನಂದಕಿಶೋರ ವರ್ಮಾ, ಕಾಲೇಜಿನ ಹಳೆಯ ವಿದ್ಯಾರ್ಥಿ ಧನಲಕ್ಷಿ??ೀ ಇಂಡಸ್ಟ್ರೀಸ್‍ನ ವ್ಯವಸ್ಥಾಪಕ ನಿರ್ದೇಶಕ ಉದ್ಯಮಿ ಶಿವಾನಂದ ಗಾದಗೆ, ರುಚಿತ ಬಿ. ಮಿಲ್ಲೇಟ್ ಆರೋಗ್ಯ ಮಿಶ್ರಿತ ಪೌಡರ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವಕುಮಾರ ಭಾಸನ್ ಉಪಸ್ಥಿತರಿದ್ದು, ತಮ್ಮ ಯಶಸ್ವಿನ ಅನುಭಗಳನ್ನು ಹಂಚಿಕೊಂಡರು.
ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ರವಿ ಹಾಲಹಳ್ಳಿ, ವೀರಭದ್ರಪ್ಪ ಬುಯ್ಯಾ, ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ, ಉಪಪ್ರಾಚಾರ್ಯ ಪೆÇ್ರ. ಅನೀಲಕುಮಾರ ಚಿಕ್ಕಮಣೂರ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಶಶಿಧರ ಪಾಟೀಲ ಸ್ವಾಗತಿಸಿದರು. ಡಾ.ಸೋಮೇಶ್ವರಿ ಮುದ್ದಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೆÇ್ರ. ಆನಿ ಕ್ರಿಸ್ಟಿನಾ ನಿರೂಪಿಸಿದರು. ಜ್ಯೋತಿ ಮೇತ್ರೆ ವಂದಿಸಿದರು. ಹೊಸ ಉದ್ಯಮ ನಿರ್ಮಾಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗುರುನಾನಕ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರೆ, ದ್ವಿತೀಯ ಮತ್ತು ತೃತೀಯ ಸ್ಥಾನ ಕರ್ನಾಟಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು. ಇವರನ್ನು ಪ್ರಥಮ ಒಂದು ಸಾವಿರ, ದ್ವಿತೀಯ ಐದು ನೂರು ರೂಪಾಯಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.