ಮಕ್ಕಳು ದೇಶದ ಅಮೂಲ್ಯ ಸಂಪತ್ತು:ಹೆಗ್ಗಣಗೇರಾ

ಸೈದಾಪುರ:ನ.18:ಮುಂದಿನ ನಾಗರಿಕರಾಗುವ ಮಕ್ಕಳು ದೇಶದ ಅಮೂಲ್ಯ ಸಂಪಾತ್ತಾಗಿದ್ದೂ, ಅವರನ್ನು ಬಹಳ ಜವಬ್ದಾರಿಯೊಂದಿಗೆ ಬೆಳಸುವ ಕೆಲಸ ಪೋಷಕರು ಸೇರಿದಂತೆ ಶಿಕ್ಷಕರಿಂದಾಗಬೇಕು ಎಂದು ಬಸರೆಡ್ಡಿಗೌಡ ಹೆಗ್ಗಣಗೇರಾ ಹೇಳಿದರು.

ಪಟ್ಟಣದ ಎಕ್ಸ್‍ಪರ್ಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ನೆಹರು ದೇಶಕಂಡ ಅದ್ಬುತ ವ್ಯಕ್ತಿಯಾಗಿದ್ದಾರೆ. ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ಮಕ್ಕಳು ನಿರಂತರ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಸಂಪಾದಿಸಬೇಕು ಅಂದಾಗ ಮಾತ್ರ ಭವಿಷ್ಯತ್ತಿನಲ್ಲಿ ಯಶಸ್ವಿಗಳಿಸಲು ಸಾಧ್ಯ ಎಂದು ಕಿವಿ ಮಾತುಗಳನ್ನು ಹೇಳಿದರು. ಇದಕ್ಕೂ ಮುಂಚೆ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ವೀಜೆತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ ಪೂರಿ, ಕಾರ್ಯದರ್ಶಿ ಬನ್ನಯ್ಯ ಸ್ವಾಮಿ ಬದ್ದೇಪಲ್ಲಿ, ಮುಖ್ಯಗುರು ಶಿವಪ್ರಸಾದ, ಶಿಕ್ಷಕರಾದ ಶ್ರೀನಿವಾಸ, ಶ್ರೀದೇವಿ, ರೆಡ್ಡಿ ಹೆಗ್ಗಣಗೇರಾ, ಸರಸ್ವತಿ, ಶ್ರೀಕಾಂತ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಕ್ಷಿತಾ, ಭೂಮಿಕಾ, ಸಾಕ್ಷಿ ಪ್ರಾರ್ಥನಾಗೀತೆ ಹಾಡಿದರು. ಶ್ರೀದೇವಿ ನಿರೂಪಿಸಿದರು.