ಮಕ್ಕಳು ಕ್ರಿಯಾಶೀಲರಾಗಿ ಬದುಕು ನಿರ್ಮಿಸಿಕೊಳ್ಳಿ : ಜಾಬಶೆಟ್ಟಿ

ಬೀದರ್:ಜ.11: ನಗರದ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರ ಮತ್ತು ಶಿಕ್ಷಕರ ಸಭೆ ಜರುಗಿತ್ತು. ಈ ಸಭೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದರು.

ಹಳೆಯ ವಿದ್ಯಾರ್ಥಿಗಳು ಕೂಡ ಇದರಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಿ.ಎಸ್.ಎ.ಎಫ್‍ನ ಹಳೆಯ ವಿದ್ಯಾರ್ಥಿ ಸಂಗಪ್ಪ ತೌಡಿ ತಾನು ಪಡೆದುಕೊಂಡ ಸೌಲಭ್ಯವನ್ನು ತಿಳಿಸಿ ಈ ಸೌಲಭ್ಯ ಕರ್ನಾಟಕ ಕಾಲೇಜಿನಲ್ಲಿ ಮಾತ್ರ ಇದ್ದಿದ್ದು. ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಓದಿನ ಸೌಲಭ್ಯಗಳನ್ನು ವಿತರಿಸಿ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಕೆಲಸ ಈ ಸಂಸ್ಥೆ ಸೇವೆ ಮಾಡುತ್ತಿದೆ. ತಾವು ಈ ಸಂಘದ ಸೌಲಭ್ಯ ಪಡೆದು ಕಲಿಯುವುದಕ್ಕೆ ಸಾಧ್ಯವಾಯಿತು ಎಂದು ಬಣ್ಣಿಸಿದರು. ಅಲ್ಲದೇ ಈ ಸಂಘದ ಮೂಲಕ ಕೆ.ಎ.ಎಸ್ ಮತ್ತು ಐ. ಎ. ಎಸ್. ತರಬೇತಿ ಕೇಂದ್ರ ಪ್ರಾರಂಭಿಸಲು ಮನವಿ ಕೂಡ ಮಾಡಿದರು. ಇನ್ನೊಬ್ಬ ಹಳೆಯ ವಿದ್ಯಾರ್ಥಿ ಭರತ್ ಮೆತ್ರೆ ಮಾತನಾಡಿ ‘ತಾನು ಡಿಗ್ರಿ ಇದ್ದಾಗ ಸಂಘದಿಂದ ಸೈಕಲ್ ಪಡೆದುಕೊಂಡಿದ್ದರಿಂದ ಶಿಕ್ಷಣಕ್ಕೆ ಆರ್ಥಿಕವಾಗಿ ಭದ್ರತೆ ನೀಡಿತು ಎಂದು ಹೇಳಿದರು. ವಿನೋದ ಬಿ.ಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ಮಾತನಾಡಿ ಸೌಲಭ್ಯವನ್ನು ಪಡೆದು ಮಹಾವಿದ್ಯಾಲಯದ ಹೆಸರನ್ನು ತರಲು ಪ್ರಯತ್ನಿಸುವೆ ಎಂದನು. ಸ್ವಾತಿ ಬಿಎಸ್ಸಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿ ಮಾತನಾಡಿ ಸೌಲಭ್ಯ ಪಡೆದುಕೊಂಡು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದೇನೆ ಎಂದಳು.

ಭಾಗ್ಯಶ್ರೀ ಬಿಕಾಂ ಪ್ರಥಮ ಸೆಮಿಸ್ಟರ್, ಕವಿತಾ ಬಿಎಸ್ಸಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ ನಿ ಮಾತನಾಡಿ ಕಾಲೇಜಿನಲ್ಲಿ ಅನ್ನಪೂರ್ಣ ಯೋಜನೆ ಮೂಲಕ ಮಧ್ಯಾಹ್ನದ ಊಟ ನೀಡುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಹೇಳಿದಳು.

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಡೀ ಜೀವನ ಮುಡುಪಾಗಿಟ್ಟು ಮಕ್ಕಳ ಶ್ರೇಯೋಭಿವೃದ್ಧಿ ಬಯಸುತ್ತಾರೆ. ಅದೇ ರೀತಿಯಲ್ಲಿ ಕರ್ನಾಟಕ ಕಾಲೇಜು ಕೂಡ ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿದೆ. ಈ ಕಾರಣಕ್ಕಾಗಿ ನನ್ನ ಮೂರು ಜನ ಮಕ್ಕಳನ್ನು ಇದೇ ಕಾಲೇಜಿನಲ್ಲಿ ಪ್ರವೇಶ ಪಡೆದು ಈ ಯೋಜನೆ ಮೂಲಕ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿ ಪೆÇೀಷಕರಾದ ರಾಜಕುಮಾರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ.ರಾ.ಶಿ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ್ ಜಾಬಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆದುಕೊಂಡು ಉನ್ನತ ಶಿಕ್ಷಣವನ್ನು ಪಡೆದು ಕಾಲೇಜಿಗೆ ಕೀರ್ತಿ ತರಬೇಕೆಂದು ಮತ್ತು ಈ ವರ್ಷದಿಂದ ಸಂಸ್ಥೆಯ ಮೂಲಕವೇ ಕೆ.ಎ.ಎಸ್ ಮತ್ತು ಐ.ಎ.ಎಸ್ ತರಬೇತಿ ನೀಡುವ ತರಗತಿಗಳನ್ನು ಕೂಡ ಪ್ರಾರಂಭಿಸಲಾಗುವುದೆಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕು. ಓದಿನಲ್ಲಿ, ಭಾಷಣದಲ್ಲಿ ಮುಂದೆ ಬರಬೇಕು. ಆದರೆ ಇತ್ತೀಚಿಗೆ ಈ ಒಂದು ಹವ್ಯಾಸ ತುಂಬಾ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಪಿಎ???ಎಫ್ ಸಂಯೋಜಕರಾದ ಬಸವರಾಜ್ ಕೊಡಂಬಲ್ ಪ್ರಾಸ್ತವಿಕ ಮಾತನಾಡಿ ಈ ಸಂಘದ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕ.ರಾ.ಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ರವಿ ಹಾಲಳ್ಳಿ, ಶ್ರೀನಾಥ್ ನಾಗುರೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಭಾರಿ ಪ್ರಾಚಾರ್ಯರಾದ ಎ.ವಿ. ಚಿಕ್ಕಮಣ್ಣೂರ ಸ್ವಾಗತಿಸಿದರು. ರಾಜ್ಯಶಾಸ್ತ್ರದ ಮುಖ್ಯಸ್ಥರಾದ ಡಿಲೀಪ ಮಾಲೆ ಅವರು ವಂದಿಸಿದರು.