ಸಂಜೆವಾಣಿ ವಾರ್ತೆ
ಸಂಡೂರು: ಅ: 03: ಪ್ರತಿಯೊಂದು ಮಗುವೂ ಸಹ ಶಿಕ್ಷಣ ಪಡೆಯಬೇಕು ಎನ್ನುವ ಮಹತ್ತರ ಉದ್ದೇಶದಿಂದ ನೂತನ ವಾಗಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ, ಅದಕ್ಕಾಗಿ ನಿರ್ದೇಶಕರ ಕಛೇರಿಯ ನೂತನ ಕಟ್ಟಡವನ್ನು ಕಟ್ಟುವುದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು, ಪ್ರಾರಂಭಿಸಲಾಗಿದೆ.
ಸಾರ್ವಜನಿಕರು ಪೂರ್ಣಪ್ರಮಾಣದಲ್ಲಿ ಸದುಪಯೋಗ ಪಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಸಾಧಿಸಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರವಿ, ಎಲ್ಲಾ ಉಪನ್ಯಾಸಕರು, ಸದಸ್ಯರಾದ ಹನುಮೇಶ್, ದೈಹಿಕ ವಿಭಾಗದ ಮುಖ್ಯಸ್ಥರಾದ ಶಿವರಾಂ ರಾಗಿ, ಚೌಡಪ್ಪ, ವಿದ್ಯಾರ್ಥಿಗಳು ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.