
ತಾಳಿಕೋಟೆ:ತಂದೆ-ತಾಯಿಯ ಅಪೇಕ್ಷೆಯಂತೆ ಒಳ್ಳೆಯ ಮಕ್ಕಳಾಗಿ ಜನ್ಮತಾಳಿದರೆ ಜೀವನ ಸಾರ್ಥಕವಾಯಿತಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ ಆದರೆ ಮಕ್ಕಳಾಗಿಯೂ ದುಷ್ಚಟಕ್ಕೆದಾಸರಾದರೆ ಮಕ್ಕಳು ಕೊಟ್ಟ ಭಗವಂತನಿಗೆ ನಮಗೆಕೇ ಇಂತಹ ಮಕ್ಕಳನ್ನು ನಿಡಿದಿಯಾ ದೇವರೆ ಎಂದು ಶಪಿಸುವ ಕಾರ್ಯ ನಡೆಯುತ್ತದೆ. ಕಾರಣ ಮಕ್ಕಳು ಒಳ್ಳೆಯ ಸಂಸ್ಕಾರ ಕುರಿತು ಮನೆತನದ ಹೆಸರು ತರುವ ಕಾರ್ಯ ಮಾಡಬೇಕೆಂದು ಶ್ರೀ ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಸೋಮವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಏರ್ಪಡಿಸಲಾದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 7ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಇಕ್ಕಳಂತೆ ಕೊಳ್ಳಿ ಹಾಕುವ ಮಕ್ಕಳಿದ್ದರೆ ಇಂತಹ ಮಕ್ಕಳನ್ನು ದೇವರು ಯಾಕೆ ಕೊಟ್ಟಿದ್ದಾನೆಂದು ಶಪಿಸತ್ತ ಮಾತಾ ಪಿತರು ಸಾಗುತ್ತಾರೆ. ಮಕ್ಕಳಿದ್ದರೆ ದುಖಃ ತಾಪತ್ರೆಯನ್ನು ಕಳೆಯಲು ಅನೂಕುಲವಾಗುತ್ತದೆ ಮಕ್ಕಳೂ ಇದ್ದರೆ ಸ್ವರ್ಗಕ್ಕಿಂತ ಹೆಚ್ಚೆಂದು ಶರಣರು ವರ್ಣನೆ ಮಾಡಿದ್ದಾg.É ಮಗುವಿದ್ದರೆ ದುಖಃ ಹೋಗುತ್ತದೆ ಆದರೆ ಮಕ್ಕಳು ಬಾಳಿಗೆ ಬೇಕು ಪ್ರಪಂಚ ಮುಂದುವರೆಯಲು ಅನೂಕುಲವಾಗುತ್ತದೆಂದರು. ಪ್ರಪಂಚ ಎನ್ನುವುದು ಖೋ ಕೊಟ್ಟಂತೆ ಜಗತ್ತು ನಿರ್ಮಾಣವಾದಾಗಿನಿಂದ ಪ್ರಪಂಚ ಎನ್ನುವುದು ಖೋ ಕೊಡುತ್ತ ಹೊರಟಿದೆ. ಮಕ್ಕಳಾದ ಮೇಲೆ ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಎಂದು ಕರೆಯಲಾಗುತ್ತದೆ ಆದರೆ ಮಕ್ಕಳು ಇರಬೇಕು ಇಕ್ಕಳಾಗಿರಬಾರದೆಂದು ಹೇಳಿದರು. ಅದಕ್ಕಾಗಿ ಜ್ಞಾನಿಗಳೂ ಸತ್ಯವಾಗಿ ಪ್ರಮಾಣ ಬದ್ಧವಾಗಿ ಋಷಿಮುನಿಗಳು ಹೇಳಿದ್ದಾರೆ ಜಗತ್ತಿನಲ್ಲಿ ಅಂಧಕಾರ ದೂರಿಕರಿಸಲು ಒಬ್ಬ ಶಿವಯೋಗಿ ಹುಟ್ಟಿ ಬರುತ್ತಾನೆ ಹಾಗೆಯೇ ಹುಟ್ಟಿ ಬಂದವರು ಅಲ್ಲಮಪ್ರಭು ದೇವರೆಂದು ಶ್ರೀಗಳು ನುಡಿದರು.
ಹತ್ತು ಹದಿನಾರು ವರ್ಷ ಮೆಲ್ಪಟ್ಟು ವಯೋಮಿತಿ ಹೊಂದುತ್ತಾ ಸಾಗಿದ ಅಲ್ಲಮಪ್ರಭು ದೇವರು ತಲೆಯಲ್ಲಿ ಜಡೆ ಬಿಟ್ಟು ಯತಾವತ ಬಾಲಕನಂತೆ ಕಾಣುತ್ತಿದ್ದ ಅಲ್ಲಮನು ಬ್ರಹ್ಮತೆಜಸ್ಸಿಂದ ಕಾಣುತ್ತಲೆ ಇದ್ದ. ಪಂಚೇದ್ರಿಯಗಳು ಹರಿದು ಹೋಗುತ್ತಿದ್ದಂತೆ ಕಾಣುತ್ತಿದ್ದರು ಅಲ್ಲಮಪ್ರಭುವಿನ ಮನಸ್ಸು ಹರಿದು ಹೊಗುತ್ತಿದ್ದಿಲ್ಲ ಯಾಕೆಂದರೆ ತಂದೆ ತಾಯಿ ಸಂಸ್ಕಾರವನ್ನು ಹಾಗೇ ನಿಡಿದ್ದಾರೆಂದರು. ವಯೋಮಿತಿ ಹೆಚ್ಚಾಗಿದ್ದರಿಂದ ಮಗ ಅಲ್ಲಮನ ವಿವಾಹಕ್ಕಾಗಿ ಚಿಂತಿಸುತ್ತಿದ್ದ ತಂದೆ ತಾಯಿಯರಾದರೆ ಇತ್ತ ಅಲ್ಲಮ ಭಗವಂತನ ಚಿಂತೆ ಮಾಡಿ ಭಗವಂತನ್ನು ಗಾಳಿಯ ರೂಪದಲ್ಲಿ ಕಂಡುಹಿಡಿಯುತ್ತಿದ್ದ ಭೂಮಂಡಲದಲ್ಲಿ ಕಣ ಕಣದಲ್ಲಿ ಏನಿದೆ ಎಂದು ಸಂಶೋಧನೆ ಮಾಡುವುದೇ ಆತನಿಗೆ ಚಿಂತೆಯಾಗಿತು.್ತ ಆದರೆ ಸತ್ಯ ಧರ್ಮವನ್ನು ಪಡೆಯುವವನು ನಾನು ಎನ್ನುವುದನ್ನು ತಡೆದವ ಪಡೆಯುತ್ತಾನೆಂದರು. ಮನುಷ್ಯ ಸುಜ್ಞಾನಿ ಆಗಬೇಕೆ ವಿನಃ ಅಜ್ಞಾನಿಯಾಗಬಾರದು ಎಂದು ಹೇಳಿದ ಶ್ರೀಗಳೂ ಮದುವೆ ವಿಚಾರ ಕೂರಿತು ತಂದೆ ತಾಯಿಗೆ ತಿಳಿ ಹೇಳಿದ ಅಲ್ಲಮ ಮದುವೆಯಿಂದ ಹೋರ ಬನ್ನಿ ಎಂದು ಅಕ್ಷತಾರೂಪಣದ ಮಂತ್ರ ಹೇಳುತ್ತದೆ ಆದರೆ ನೀವು ನನಗೆ ಲಗ್ನವಾಗಲೂ ಹೇಳುತ್ತಿರಿ ಇಗಾಗಲೇ ನನ್ನ ಲಗ್ನವಾಗಿದೆ ಪಾರಮಾರ್ಥದ ಭಗವಂತನೊಂದಿಗೆ ಆಗಿದೆ ಎಂದು ಹೇಳಿದ ಅಲ್ಲಮಪ್ರಭು ಹೊನ್ನಿಗಾಗಿ, ಮಣ್ಣಿಗಾಗಿ, ಹೆಣ್ಣಿಗಾಗಿ ಬಂದವನಾನಲ್ಲ ಜಗತ್ತಿನ ಜನರಿಗೆ ಜ್ಞಾನದ ಬೋಧನೆ ಮಾಡಲು ಬಂದಿದ್ದೆನೆಂದು ಅಲ್ಲಮಪ್ರಭು ಊರನ್ನು ತೊರೆಯುತ್ತಾನೆ. ಊರನ್ನು ತೊರೆದ ಅಲ್ಲಮ ರಸ್ತೆಯಲ್ಲಿ ಹೊರಟಾಗ ದೂರದ ಮಗ್ಗಲಿನ ಮನೆಯಲ್ಲಿ ಮಗುವೊಂದು ಸತ್ತಿತ್ತು ಮಗುವಿನ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಅಲ್ಲಮ ಪ್ರಭು ಅದನ್ನು ನೋಡಿ ಕೂಸಿನ ಕೈಮುಟ್ಟಿ ಎಲ್ಲಿ ಸತ್ತಿದೆ ಎಂದು ಕೇಳಿ ಮುಟ್ಟಿದಾಗ ಮಗು ಜೀವಂತವಾಗಿಯೇ ಇತ್ತು ಅದನ್ನು ಕಂಡ ತಾಯಿ ಹರ್ಷಭರಿತಳಾಗುತ್ತಾಳೆ ಮುಂದೆ ಅಲ್ಲಮನು ಬನವಾಸಿಗೆ ತೆರಳುತ್ತಾನೆಂದು ಶ್ರೀಗಳು ಪ್ರವಚನವನ್ನು ಮುಂದುವರೆಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತಮಂಟಪಮತ್ತುಸೌಂಡಸಿಸ್ಟಮದರಪೀಕಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕಾವಿ) ಉಪಸ್ಥಿತರಿದ್ದರು.