ಮಕ್ಕಳಿಗೆ ಸ್ವೀಟ್ ನೀಡಿ ಬರಮಾಡಿಕೊಂಡ ಸಿಡಿಪಿಓ ಮುರುಗೇಶ್ ಗುಣಾರಿ

ಸೇಡಂ,ನ,08: ತಾಲೂಕಿನಾದ್ಯಂತ ಇಂದಿನಿಂದ 318 ಅಂಗನವಾಡಿ ಕೇಂದ್ರಗಳು ಪುನರಾರಂಭವಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಯೋಜನಾಧಿಕಾರಿ (ಸಿಡಿಪಿಓ) ಮುರುಗೇಶ್ ಗುಣಾರಿ ಅವರು ಇಂದು ತಾಲೂಕಿನ ಮಳಖೇಡ ಗ್ರಾಮದ ಸಮಖೇಡ್ ತಾಂಡದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸ್ವೀಟ್, ಗುಲಾಬಿ ಹೂವು ನೀಡಿ ಕೇಂದ್ರದ ಒಳಗೆ ಬರಮಾಡಿಕೊಂಡರು. ಈ ವೇಳೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜ್ಯೋತಿ ಇದ್ದರು.


ಸರ್ಕಾರದ ಆದೇಶದಂತೆ ಇಂದು ತಾಲೂಕಿನಾದ್ಯಂತ 318 ಅಂಗನವಾಡಿ ಕೇಂದ್ರಗಳು ಪುನಃ ಪ್ರಾರಂಭಿಸಲಾಗಿದ್ದು ಬೆಳಗ್ಗೆ 9 ಗಂಟೆಯಿಂದ 4 ಗಂಟೆವರೆಗೆ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಮುರುಗೇಶ್ ಗುಣಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಾಲ್ಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇಡಂ.